ಇಂಪಾಲ : ಮಣಿಪುರದ ಪೂರ್ವ ಇಂಪಾಲ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಹೂತಿಟ್ಟಿದ್ದ ಅತ್ಯಂತ ಶಕ್ತಿಶಾಲಿ IED (Improvised Explosive Device) ಬಾಂಬನ್ನು ಪೊಲೀಸರು ಇಂದು ಬುಧವಾರ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದರು.
Advertisement
ದೊಲೈತಾಬಿ ಎಂಬಲ್ಲಿ ನೆಲದಡಿ ಹುದುಗಿಡಲಾಗಿದ್ದ ಈ ಶಕ್ತಿಶಾಲಿ IED ಬಾಂಬನ್ನು ಸ್ಥಳೀಯರು ಗುರುತಿಸಿ ಪೊಲೀಸರಿಗೆ ವಿಷಯ ತಿಳಿಸಿದರು.
ಒಡನೆಯೇ ಬಾಂಬ್ ವಿಲೇವಾರಿ ತಂಡದ ಪರಿಣತರು ಆಗಮಿಸಿ ಬಾಂಬನ್ನು ನಿಷ್ಕ್ರಿಗೊಳಿಸಿ ಸಂಭವನೀಯ ಭಾರೀ ನ್ಪೋಟದ ದುರಂತವನ್ನು ತಪ್ಪಿಸಿದರು ಎಂದು ಪೊಲಿಸರು ತಿಳಿಸಿದ್ದಾರೆ.