Advertisement

ಖಾಸಗಿತನದ ಆಕ್ರಮಣ: ನಟಿ ಆಲಿಯಾ ಭಟ್ ಸಂಪರ್ಕಿಸಿದ ಪೊಲೀಸರು

09:27 PM Feb 22, 2023 | Team Udayavani |

ಮುಂಬೈ: ಛಾಯಾಗ್ರಾಹಕರು ತಮ್ಮ ಖಾಸಗಿತನಕ್ಕೆ ಧಕ್ಕೆ ತಂದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಿದ ಬಳಿಕ ಮುಂಬೈ ಪೊಲೀಸರು ಬಾಲಿವುಡ್ ನಟಿ ಆಲಿಯಾ ಭಟ್ ಅವರನ್ನು ಸಂಪರ್ಕಿಸಿದ್ದಾರೆ.

Advertisement

ಆದಾಗ್ಯೂ, ನಟಿ ಯಾವುದೇ ಔಪಚಾರಿಕ ದೂರು ದಾಖಲಿಸಿಲ್ಲ ಎಂದು ಬುಧವಾರ ಇಲ್ಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಆಲಿಯಾ ಅವರು ತನ್ನ ಮನೆಯೊಳಗೆ ಇರುವಾಗ ತನ್ನ ಚಿತ್ರಗಳನ್ನು ಕ್ಲಿಕ್ ಮಾಡಿದ್ದಕ್ಕಾಗಿ ಛಾಯಾಗ್ರಾಹಕರ ವಿರುದ್ಧ ಆಕ್ರೋಶ ಹೊರ ಹಾಕಿ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿದ್ದರು. ಖಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ಆಕೆಯನ್ನು ಸಂಪರ್ಕಿಸಿದರೂ ಆಕೆ ಯಾವುದೇ ಔಪಚಾರಿಕ ದೂರು ದಾಖಲಿಸಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next