Advertisement

ಪೊಲೀಸ್‌ ಪೇದೆ ಗಾಂಧಿಗಿರಿ ಪ್ರತಿಭಟನೆ!

02:28 PM Aug 19, 2020 | Suhan S |

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75 ಪಟ್ಟಣ ವ್ಯಾಪ್ತಿಯಲ್ಲಿ ನ್ಯಾಯ ಬೇಕೆಂದು ಆಗ್ರಹಿಸಿ ಪೊಲೀಸ್‌ ಪೇದೆಯೋರ್ವ ಗಾಂಧೀಜಿ ಫೋಟೊ ಹಿಡಿದುಕೊಂಡು ಪ್ರತಿಭಟನೆ ಮಾಡಿದ ಘಟನೆ ಮಂಗಳವಾರ ಸಂಜೆ ನಡೆಯಿತು.

Advertisement

ಜನನಿಬಿಡ ರಾಷ್ಟ್ರೀಯ ಹೆದ್ದಾರಿ 75 ಪಟ್ಟಣದ ಅಪೋಲೋ ಮೆಡಿಕಲ್‌ನ ಮುಂಭಾಗ ಗ್ರಾಮಾಂತರ ಠಾಣೆಯ ಪೊಲೀಸ್‌ ಪೇದೆ ದಯಾನಂದ್‌ ತಮ್ಮ ಕಾರು ನಿಲ್ಲಿಸಿ ಔಷಧಿ ತರಲು ಮೆಡಿಕಲ್‌ ಷಾಪ್‌ ಒಳಗೆ ಹೋಗಿ ದ್ದರು. ಈ ಸಂದಭದಲ್ಲಿ ಅನಧಿಕೃತ ಜಾಗದಲ್ಲಿ ವಾಹನ ನಿಲುಗಡೆಯಾಗಿರುವುದನ್ನು ಕಂಡ ತಹಶೀಲ್ದಾರ್‌ ಮಂಜುನಾಥ್‌ ತಮ್ಮ ಕಾರು ಚಾಲಕನಿಗೆ ವಾಹನದ ಗಾಳಿ ಬಿಡಲು ಹೇಳಿದರು.

ಈ ಸಂರ್ಧಭದಲ್ಲಿ ತಹಶೀಲ್ದಾರ್‌ ವಾಹನದ ಚಾಲಕ ಕಾರಿನ ಚಕ್ರದ ಗಾಳಿ ಬಿಡುವಾಗ ಮೆಡಿಕಲ್‌ ಷಾಪ್‌ನಿಂದ ಪೇದೆ ಹೊರ ಬಂದಿದ್ದು ತಹಶೀಲ್ದಾರ್‌ ಮಂಜುನಾಥ್‌ ಜೊತೆ ಮಾತಿನ ಚಕಾಮುಕಿ ನಡೆಸಿದ್ದಾರೆ. ನಂತರ ಸ್ಥಳದಿಂದ ತಹಶೀಲ್ದಾರ್‌ ಬೇರೆಡೆಗೆ ತೆರಳಿದ್ದು ಈ ವೇಳೆ ಪೇದೆ ದಯಾನಂದ್‌ ಮಹಾತ್ಮಗಾಂಧೀಜಿಯವರ ಫೋಟೊ ಹಿಡಿದು ಕಾರಿನ ಮುಂಭಾಗ ಕುಳಿತು ನ್ಯಾಯ ಕೊಡಿಸಬೇಕು. ತಹಶೀಲ್ದಾರ್‌ ನೋಟಿಸ್‌ ಕೊಡಲಿ, ದಂಡ ಹಾಕಲಿ. ಆದರೆ ಕಾರಿನ ಚಕ್ರದ ಗಾಳಿ ತೆಗೆದಿದ್ದು ಸರಿಯಲ್ಲ ಎಂದು ಧರಣಿ ಕುಳಿತರು.

ಇದರಿಂದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೆಲವು ಸಮಯ ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯುಂಟಾಯಿತು. ಅಂತಿಮವಾಗಿ ನಗರ ಠಾಣೆ ಪಿಎಸ್‌ಐ ರಾಘವೇಂದ್ರ ಹಾಗೂ ಗ್ರಾಮಾಂತರ ಠಾಣೆಯ ಪಿಎಸ್‌ಐ ಚಂದ್ರಶೇಖರ್‌ ಬಂದು ಇತರೆ ಪೊಲೀಸರ ಸಹಾಯ ದಿಂದ ಪೇದೆಯನ್ನು ಎತ್ತಿಕೊಂಡು ನಗರ ಠಾಣೆಗೆ ಕರೆದೊಯ್ದರು.

Advertisement

Udayavani is now on Telegram. Click here to join our channel and stay updated with the latest news.

Next