Advertisement
ಗುರುವಾರ ಸಂಜೆ ಕುಂದಾಪುರ ಕ್ಷೇತ್ರದ ಚುನಾವಣಾಧಿಕಾರಿ ಭೂಬಾಲನ್, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್‌ಚಂದ್ರ, ಕುಂದಾಪುರದ ಪೊಲೀಸ್ ಉಪಾಧೀಕ್ಷಕ ದಿನೇಶ್ ಕುಮಾರ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ್, ಕೋಟ ಪೊಲೀಸ್ ಉಪ ನಿರೀಕ್ಷಕ ಸಂತೋಷ ಕಾಯ್ಕಿಣಿ ಮುಂತಾದವರು ಟೋಲ್‌ಗೇಟ್ ಬಳಿ ತಪಾಸಣೆ ನಡೆಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸ್ಥಳಾಂತರ ಗೊಳಿಸಿದ್ದಾರೆ.
ತಪಾಸಣೆಗಾಗಿ 4 ಸಿ.ಆರ್. ಪಿ.ಎಫ್. ಯೋಧರು, ಮೂವರು ಪೊಲೀಸ್ ಸಿಬಂದಿಯನ್ನು ನೇಮಕ ಮಾಡಿದ್ದು, ಕುಂದಾಪುರ-ಉಡುಪಿ ಮಾರ್ಗವಾಗಿ ಸಂಚರಿಸುವ ಬಸ್ಸು, ಲಾರಿ, ಆ್ಯಂಬುಲೆನ್ಸ್ ಮುಂತಾದ ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ ಮಿಕ್ಕೆಲ್ಲವನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಸಿಬಂದಿ 8 ಗಂಟೆಯ ಕಾಲ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಲವು ಒಳ ದಾರಿಗಳು
ಸಾಸ್ತಾನ ಚೆಕ್‌ಪೋಸ್ಟ್ ಅಕ್ಕ-ಪಕ್ಕದಲ್ಲಿ ಕೋಟ-ಗೋಳಿಯಂಗಡಿ ರಸ್ತೆ, ಕಾರ್ಕಡ-ಕಾವಡಿ ರಸ್ತೆ ಮೂಲಕ ನೇರವಾಗಿ ಬ್ರಹ್ಮಾವರ ತಲುಪಬಹುದಾಗಿದೆ ಹಾಗೂ ಸಾಲಿಗ್ರಾಮ-ಪಾರಂಪಳ್ಳಿ ಕೋಡಿ ರಸ್ತೆಯ ಮೂಲಕ ಚೆಕ್‌ಪೋಸ್ಟ್ ತಪ್ಪಿಸಿ ರಾಷ್ಟ್ರೀಯ ಹೆದ್ದಾರಿ ತಲುಪಬಹುದಾಗಿದೆ. ಹೀಗಾಗಿ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಇದು ಸ್ವಲ್ಪ ತೊಡಕಾಗಬಹುದು ಎನ್ನುವ ಅಭಿಪ್ರಾಯವಿದೆ.