Advertisement

ತಮಿಳು ನಿರ್ದೇಶಕ ಮಣಿ ರತ್ನಂ ವಿರುದ್ಧ ಎಫ್‍ಐಆರ್ ದಾಖಲು  

03:11 PM Sep 03, 2021 | Team Udayavani |

ಚೆನ್ನೈ: ತಮಿಳಿನ ಖ್ಯಾತ ಸಿನಿಮಾ ನಿರ್ದೇಶಕ ಮಣಿ ರತ್ನಂ ಅವರಿಗೆ ಕಾನೂನಿನ ಕಂಠಕ ಎದುರಾಗಿದೆ. ಈ ಹಿರಿಯ ನಿರ್ದೇಶಕನ ವಿರುದ್ಧ ದೂರು ದಾಖಲಾಗಿದೆ.

Advertisement

ಮಣಿ ರತ್ನಂ ಅವರು ಐತಿಹಾಸಿ ಕಥಾ ಹಂದರದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಬಳಸಲಾಗಿದ್ದ ಕುದುರೆಯೊಂದು ಚಿತ್ರೀಕರಣದ ವೇಳೆ ಸಾವನ್ನಪ್ಪಿದೆ. ಈ ಕಾರಣವಾಗಿ ಹೈದರಾಬಾದ್​ನಲ್ಲಿ ಕುದುರೆಯ ಮಾಲೀಕ, ಸಿನಿಮಾ ನಿರ್ಮಾಣ ಸಂಸ್ಥೆ ಹಾಗೂ ಚಿತ್ರತಂಡದ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಆಗಸ್ಟ್​ 11ರಂದು ಕುದುರೆ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಆಗಸ್ಟ್​ 18 ರಂದು ಎಫ್​ಐಆರ್​ ದಾಖಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸೆ. 2ರಂದು. ದ ಅನಿಮಲ್ ವೆಲ್​ಫೇರ್ ಬೋರ್ಡ್​ ಆಫ್​ ಇಂಡಿಯಾ (AWBI) ಕುದುರೆ ಸಾವಿನ ಕುರಿತಾಗಿ ತನಿಖೆ ನಡೆಸಿ ವರದಿ ನೀಡುವಂತೆ ಹೈದರಾಬಾದ್​ನ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ಸಿನಿಮಾದಲ್ಲಿ ಯುದ್ಧ ನಡೆಯುವ ದೃಶ್ಯಗಳ ಚಿತ್ರೀಕರಣಕ್ಕಾಗಿ ಕುದುರೆಗಳನ್ನು ಬಳಸಲಾಗುತ್ತಿದ್ದು, ಶೂಟಿಂಗ್ ವೇಳೆ ಕುದುರೆ ಕೆಳಗೆ ಬಿದ್ದು ಪೆಟ್ಟಾಗಿ ಅಸುನೀಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ಆಗಬೇಕಿದೆ. ಪೇಟಾ ಹೇಳಿರುವಂತೆ ಸುಸ್ತಾಗಿರುವ ಕುದುರೆಗಳನ್ನು ಸತತವಾಗಿ ಬಿಸಿಲಿನಲ್ಲಿ ಶೂಟಿಂಗ್​ನಲ್ಲಿ ಬಳಸಿಕೊಂಡ ಕಾರಣದಿಂದ ಡಿಹೈಡ್ರೇಷನ್​ ಆಗಿ ಕುದುರೆ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಸಿನಿಮಾಗಳಲ್ಲಿ ಪ್ರಾಣಿಗಳನ್ನು ಬಳಸಿಕೊಳ್ಳಲು ಕಠಿಣ ನಿಯಮಗಳಿವೆ. ಹಾಗಾಗಿಯೇ ಚಿತ್ರತಂಡಗಳು ಪ್ರಾಣಿಗಳ ಬದಲಾಗಿ ಸಿಜಿಐ ಅಥವಾ ಇತರೆ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಾರೆ. ಇದು ಪೌರಾಣಿಕ ಕಥಾಹಂದರ ಹೊಂದಿರುವ ಸಿನಿಮಾ ಆಗಿದ್ದು, ಯುದ್ಧದ ಸನ್ನಿವೇಶಗಳು ತುಂಬಾ ಇವೆ. ಹೀಗಾಗಿಯೇ ಕುದುರೆಗಳನ್ನು ಬಳಸಲಾಗಿದೆಯಂತೆ.

ಇನ್ನು ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ನಟಿಸುತ್ತಿದ್ದಾರೆ. ಹೆಸರಾಂತ ತಮಿಳು ಲೇಖಕ ಕಲ್ಕಿ ಕೃಷ್ಣಮೂರ್ತಿ 1954ರಲ್ಲಿ ರಚಿಸಿದ್ದ ಚೋಳ ರಾಜಮನೆತನದ ಐತಿಹಾಸಿಕ ಹಿನ್ನೆಲೆಯ ಕಾದಂಬರಿ ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next