Advertisement
ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ನೇತೃತ್ವದಲ್ಲಿ ಬಿಗಿಬಂದೋಬಸ್ತ್ ಕಲ್ಪಿಸಲಾಗಿದ್ದು, ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು, 15 ಡಿಸಿಪಿಗಳಿಗೆ ಬಂದೋಬಸ್ತ್ನ ಜವಾಬ್ದಾರಿ ವಹಿಸಲಾಗಿದೆ. ಕಾನೂನು ಸುವ್ಯವಸ್ಥೆಯ 11 ಸಾವಿರ ಪೊಲೀಸ್ ಸಿಬ್ಬಂದಿ, 4 ಸಾವಿರ ಸಂಚಾರ ಪೊಲೀಸರು, 30 ಕೆಎಸ್‌ಆರ್‌ಪಿ ತುಕಡಿ, 34 ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ತುಕಡಿ, 3 ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್), 5 ರ್ಯಾಪಿಡ್ ಇಂಟರ್‌ವೆನÒನ್ ವೆಹಿಕಲ್ಸ್ ( ಆರ್‌ಐವಿ)ಗಳನ್ನು ಭದ್ರತೆ ನಿಯೋಜಿಸಲಾಗಿದೆ.
Related Articles
Advertisement
ಅದೇ ರೀತಿ ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್‍ನಿಂದ ಸುಮನಹಳ್ಳಿ ಜಂಕ್ಷನ್ ಕಡೆಗೆ ಹೋಗುವ ವಾಹನಗಳಿಗೂ ನಿರ್ಬಂಧ ವಿಧಿಸಲಾಗಿದೆ. ಈ ಮಾರ್ಗದಲ್ಲಿ ಬರುವ ವಾಹನಗಳು ತುಮಕೂರು ರಸ್ತೆ ಗೊರಗುಂಟೆ ಪಾಳ್ಯ – ಎಂಇಐ ಜಂಕ್ಷನ್ – ಆರ್‌ಎಂಸಿ ಯರ್ಡ್ ಮಾರಪ್ಪನ ಪಾಳ್ಯ- ಸ್ಯಾಂಡಲ್ ಸೋಪ್ ಫ್ಯಾಕ್ಟರಿ ವೃತ್ತ ಮೂಲಕ ಪಶ್ಚಿಮ ಕಾರ್ಡ್ ರಸ್ತೆ ಕಡೆ ಹಾದು ಹೋಗಬಹುದಾಗಿದೆ.
ಸ್ಯಾಂಕಿ ರಸ್ತೆ – ಮಾರಮ್ಮ ವೃತ್ತ- ಯಶವಂತಪುರ ಮೂಲಕ ತುಮಕೂರು ರಸ್ತೆ ಕಡೆಗೆ ಹಾದು ಹೋಗುವ ವಾಹನಗಳ ಸಂಚಾರ ಮಾರ್ಗ ಬದಲಾವಣೆ. ಪರ್ಯಾಯ ಮಾರ್ಗ: ಮೇಖ್ರೀ ವೃತ್ತದಲ್ಲಿ ಎಡ ತಿರುವು ತೆಗೆದುಕೊಂಡು ಸಿ.ವಿ ರಾಮನ್ ರಸ್ತೆ , ಸದಾಶಿವ ನಗರ ಠಾಣೆ ಜಂಕ್ಷನ್ ಬಲತಿರುವು ಪಡೆದು ಬಿಇಎಲ್ ರಸ್ತೆ ತಲುಪಬೇಕು. ನಂತರ ಕುವೆಂಪು ವೃತ್ತದಲ್ಲಿ ಎಡತಿರುವು ಪಡೆದು ಬಿಇಎಲ್ ವೃತ್ತ ಬಲತಿರುವು ಪಡೆಯಬೇಕು. ಬಳಿಕ ಗಂಗಮ್ಮ ವೃತ್ತ ಎಡತಿರುವು ಪಡೆದು ತುಮಕೂರು ರಸ್ತೆ ತಲುಪಬಹುದು.
ಮದ್ಯ ಮಾರಾಟ ನಿಷೇಧ: ಅಂಬರೀಶ್ ಅವರ ಅಂತ್ಯಕ್ರಿಯೆ ಪೂರ್ಣಗೊಳ್ಳುವವರೆಗೆ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಸೋಮವಾರ ಮಧ್ಯರಾತ್ರಿ 12 ಗಂಟೆಯವರೆಗೆ ನಗರದಲ್ಲಿ ಮದ್ಯಮಾರಾಟ ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಪೊಲೀಸರ ಬಂದೋಬಸ್ತ್ (ಅವಶ್ಯ ಎನಿಸಿದರೆ ಬಳಸಬಹುದು) -ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು
-15 ಮಂದಿ ಡಿಸಿಪಿಗಳು
-11 ಸಾವಿರ ಕಾನೂನು ಸುವ್ಯವಸ್ಥೆ ಪೊಲೀಸರು
-4 ಸಾವಿರ ಸಂಚಾರ ಅಧಿಕಾರಿ, ಸಿಬ್ಬಂದಿ
-30 ಕೆಎಸ್‌ಆರ್‌ಪಿ ತುಕಡಿ
-34 ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ತುಕಡಿ
-3 ರ್ಯಾಪಿಡ್ ಆ್ಯಕ್ಷನ್ ಪೋರ್ಸ್(ಆರ್‌ಎಎಫ್)
-5 ರ್ಯಾಪಿಡ್ ಇಂಟರ್‌ವೆನನ್ ವೆಹಿಕಲ್ಸ್ ( ಆರ್‌ಐವಿ)