ಇದರ ಜತೆಗೆ ಯಾವುದೇ ಅಪರಾಧ ಚಟುವಟಿಕೆಗಳು ಘಟಿಸದಂತೆ ಎಚ್ಚರ ವಹಿಸುವುದು ಹಾಗೂ ಸಮರ್ಥ ಮಾಹಿತಿ ಕಲೆ ಹಾಕಿ ಆರಂಭದಲ್ಲೇ ಪತ್ತೆ ಹಚ್ಚಿ ವಿಫಲಗೊಳಿಸಲು ಹೆಚ್ಚಿನ ನಿಗಾ ಇರಿಧಿಸಬೇಕು. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲೂ ಗಮನಹರಿಸಬೇಕಾ ದದ್ದು ಈ ಬೀಟ್ ವ್ಯವಸ್ಥೆಯ ಉದ್ದೇಶ.
Advertisement
ಕುಳಾಯಿ ಬೈಕಂಪಾಡಿಯಿಂದ ಹಿಡಿದು, ಸಸಿಹಿತ್ಲು, ಸೂರಿಂಜೆ ವರೆಗೆ ಸುರತ್ಕಲ್ ಪೊಲೀಸ್ ವ್ಯಾಪ್ತಿಯ ಎಲ್ಲ ಗ್ರಾಮ ಮತ್ತು ಬಡಾವಣೆಗಳನ್ನು ಠಾಣೆಯ 47 ಮಂದಿ ಸಿಬಂದಿಗೆ ಹಂಚಿಕೆ ಮಾಡಲಾಗಿದೆ.
ಪೊಲೀಸರು ಜನಸ್ನೇಹಿಯಾಗ ಬೇಕು. ಪೊಲೀಸ್ ವ್ಯವಸ್ಥೆ ಸಮುದಾಯದತ್ತ ಚಲಿಸಬೇಕು ಎಂಬುದು ಸರಕಾರದ ನೀತಿ. ಈ ನೀತಿಯನ್ನು ಜಾರಿಗೆ ತರಲು ಪೊಲೀಸರು ಹಾಗೂ ಮುಖ್ಯ ಪೇದೆಗಳನ್ನು ಜನಮುಖೀಗಳನ್ನಾಗಿಸುವ ದೃಷ್ಟಿಯಿಂದ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆ ತಂದು ಸರಕಾರ ಆದೇಶ ಹೊರಡಿಸಿದೆ. ಬೀಟ್ ಹೊಣೆಗಾರಿಕೆ
ಸುರತ್ಕಲ್ ಸಹಿತ ಪ್ರತಿ ಠಾಣೆ ಯಲ್ಲಿರುವ ಪೊಲೀಸ್ ಪೇದೆಗಳು ಮತ್ತು ಮುಖ್ಯ ಪೇದೆಗಳ ಒಟ್ಟು ಸಂಖ್ಯೆಗೆ ಅನುಗುಣವಾಗಿ ಠಾಣಾ ವ್ಯಾಪ್ತಿ ವಿಭಜಿಸಿ ಪ್ರತಿ ಪ್ರದೇಶವನ್ನು ಬೀಟ್ (ಗಸ್ತು) ಎಂದು ಪರಿಗಣಿಸಲಾಗಿದೆ.ಆಯಾ ಬೀಟ್‌ನ ಹೊಣೆಗಾರಿಕೆ ಸಂಪೂರ್ಣವಾಗಿ ಸಂಬಂಧಪಟ್ಟ ಸಿಬಂದಿಯದ್ದು.
Related Articles
Advertisement
ಕಾರ್ಯಭಾರ ಹೆಚ್ಚುಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಟ್ಟು 47 ಸಿಬಂದಿಗಳಿದ್ದು, 6 ಎಎಸ್‌ಐಗಳು, 2 ಎಸ್‌ಐಗಳು ಹಾಗೂ ವೃತ್ತ ನಿರೀಕ್ಷಕರನ್ನು ಹೊಂದಿದೆ. ಗ್ರಾಮಾಂತರ ಹಾಗೂ ಮಹಾನಗರ ಪಾಲಿಕೆ ಎರಡೂ ಆಡಳಿತದ ಕಾರ್ಯಭಾರವನ್ನು ಹೊಂದಿದೆ. ಸೂಕ್ಷ್ಮ ಪ್ರದೇಶಗಳೂ ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದು ಬೀಟ್ ವ್ಯವಸ್ಥೆಯನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಮಾಹಿತಿಯಿದ್ದರೆ ತಿಳಿಸಿ
ಗ್ರಾಮ ಹಾಗೂ ಬಡಾವಣೆಯಲ್ಲಿ ಖಾಸಗಿ ಹೊರತು ಪಡಿಸಿ ಸಾಮಾಜಿಕ ಅಭಿವೃದ್ಧಿ ಹಾಗೂ ಯಾವುದೇ ಅಹಿತಕರ ಘಟನೆಗಳ ಲಕ್ಷಣ ಕಂಡು ಬಂದರೆ ಭಯಪಡದೇ ನಿಮ್ಮ ಬೀಟ್ ಪೊಲೀಸರಿಗೆ ಮಾಹಿತಿ ನೀಡಿ. ಅವರ ಮೊಬೈಲ್ ಸಂಖ್ಯೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಮಾಹಿತಿ ನೀಡುವವರ ಹೆಸರನ್ನಾಗಲೀ, ವಿವರವನ್ನಾಗಲೀ ಪೊಲೀಸರು ಬಹಿರಂಗಪಡಿಸುವುದಿಲ್ಲ. ಸಮಾಜಕ್ಕೆ ಭಂಗ ತರುವ ಚಟು ವಟಿಕೆ ಮಟ್ಟಹಾಕುವುದರ ಜತೆಗೆ ಸಾರ್ವ ಜನಿಕರ ಆಸ್ತಿ, ಪ್ರಾಣ ಹಾನಿ ತಪ್ಪಿಸುವ ಉದ್ದೇಶದಿಂದಲೇ ಈ ಹೊಸ ಪದ್ಧತಿ ಬೀಟ್ ವ್ಯವಸ್ಥೆ ಬಂದಿದೆ. ಮುನ್ನೆಚ್ಚರಿಕೆ ಕ್ರಮ
ಬೀಟ್‌ನ ಪ್ರಮುಖ ಉದ್ದೇಶ ಇಲಾಖೆಯನ್ನು ಜನಸ್ನೇಹಿಯಾಗಿ ಸುವುದರ ಜತೆಗೆ ಗಣ್ಯರು, ಸಾಹಿತಿಗಳು, ಕಲಾವಿದರು ಮತ್ತಿತರರ ಕಾಳಜಿಯ ಜತೆಗೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರ ಮೇಲೆ ನಿಗಾ, ಯಾವುದೇ ಅಪರಾಧ ಆಗುವುದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದಾಗಿದೆ. ಈ ಹೊಸ ವ್ಯವಸ್ಥೆಗೆ ಪೊಲೀಸರ ಜತೆ ಕೈಜೋಡಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ನೆರವಾಗಬೇಕು.
– ಚೆಲುವರಾಜ್,
ವೃತ್ತ ನಿರೀಕ್ಷಕರು,ಸುರತ್ಕಲ್ ಪೊಲೀಸ್ ಠಾಣೆ