Advertisement

ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ

05:07 PM Dec 09, 2019 | Team Udayavani |

ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ವಿಭೂತಿಕೆರೆ ಗ್ರಾಮದ ಮಾವಿನ ತೋಟವೊಂದರಲ್ಲಿ ಶನಿವಾರ ರಾತ್ರಿ ನಡೆಯುತ್ತಿದ್ದ ಅಕ್ರಮ ರೇವ್‌ ಪಾರ್ಟಿಯ ಮೇಲೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ 10 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

ವಿಭೂತಿಕೆರೆ ಗ್ರಾಮದ ಬಳಿ ವೆಂಕಟೇಶ್‌ ಎಂಬುವರಿಗೆ ಸೇರಿದ ಸುಮಾರು 32 ಎಕರೆ ವಿಸ್ತೀರ್ಣದ ಮಾವಿನ ತೋಟದಲ್ಲಿ ಶನಿವಾರ ತಡರಾತ್ರಿ ಅಕ್ರಮವಾಗಿ ಪಾರ್ಟಿ ಏರ್ಪಡಿಸಲಾಗಿತ್ತು. ಕೇರಳ, ತಮಿಳುನಾಡು, ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಿಂದ 500ಕ್ಕೂ ಹೆಚ್ಚು ಮಂದಿ ಯುವಕ, ಯುವತಿಯರು ಇಲ್ಲಿ ಜಮಾಯಿಸಿ ಮೋಜು, ಮಸ್ತಿಯಲ್ಲಿ ತೊಡಗಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.

ಮಧುಮಿತ ಎಂಬುವರು ರೇವ್‌ ಪಾರ್ಟಿ ಆಯೋಜನೆ ಮಾಡಿದ್ದರು. ಇವರಿಗೆ ಪುರಾಣಿಕ್‌ ಪುರೋಹಿತ್‌, ನಬಿರಾ,ರಿಚು ಎಂಬುವವರು ಸಾಥ್‌ ನೀಡಿದ್ದಾರೆ. ಪಾರ್ಟಿಗಾಗಿ ಯುವಕ ಯುವತಿಯರು ದ್ವಿಚಕ್ರ ವಾಹನ, ಕಾರುಗಳಲ್ಲಿ ಆಗಮಿಸಿ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಗೊತ್ತಾಗಿದ್ದು ಹೇಗೆ?: ತಡರಾತ್ರಿ ತೋಟದಿಂದ ಬರುತ್ತಿದ್ದ ಸಂಗೀತದ, ಕಿರುಚಾಟದ ಸದ್ದು, ಬೆಳಕು ಇತ್ಯಾದಿಗಳನ್ನು ಗಮನಿಸಿದ ಸಾರ್ವಜನಿಕರು ತಡ ರಾತ್ರಿಯಲ್ಲಿ ಗ್ರಾಮಾಂತರ ಪೊಲೀಸರಿಗೆ ತಿಳಿಸಿದ್ದಾರೆ. ಡಿಜೆ ಸೌಂಡ್‌ಗೆ ನೃತ್ಯ ಮಾಡುತ್ತಿದ್ದ ವೇಳೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನೂಪ್‌ ಎ.ಶೆಟ್ಟಿ ನೇತೃತ್ವದಲ್ಲಿ ರಾಮ ನ ಗರ ಗ್ರಾಮಾಂತರ ಠಾಣೆ

ಪೊಲೀಸರು ದಾಳಿ ನಡೆಸಿದ್ದಾರೆ. ಈ ಪಾರ್ಟಿಗಾಗಿ ಕಳೆದ ಒಂದು ತಿಂಗಳಿನಿಂದಲೂ ತಂಡ ತಯಾರಿ ನಡೆಸಿತ್ತು ಎಂದು ಗೊತ್ತಾಗಿದೆ. ಇದಕ್ಕಾಗಿ ಮೊಬೈಲ್‌ ಆ್ಯಪ್‌ ಕೂಡಸಿದ್ಧವಾಗಿತ್ತು. ಆ್ಯಪ್‌ ಮೂಲಕವೇ ಪಾರ್ಟಿಗೆ ಯುವಕ ಮತ್ತು ಯುವತಿಯರನ್ನು ಸಳೆಯಲಾಗಿದೆ.

Advertisement

ಮದ್ಯವಶ: ದಾಳಿ ವೇಳೆ ಮದ್ಯ , ಡಿಜೆ ಬಾಕ್ಸ್‌ಗಳು, ಶಾಮಿಯಾನ,ಕ್ಯಾಮೆರಗಳು ಸೇರಿದಂತೆ  ಹಲವು ವಸ್ತು ಗಳನ್ನು ಪೊಲೀಸರು ವಶ ಪಡೆದುಕೊಂಡಿದ್ದಾರೆ. ಅನಧಿಕೃತವಾಗಿ ರೇವ್‌ ಪಾರ್ಟಿ ಆಯೋಜನೆ ಮಾಡಿದ್ದರ ಸಂಬಂಧ ಆಯೋಜಕರ ವಿರುದ್ಧ ಕೇಸು ದಾಖಲಿಸಲು ರಾಮನಗರ ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next