Advertisement
ಹೊರ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಸೊಣಕನಹಳ್ಳಿ ಪ್ರದೇಶದಲ್ಲಿ ಅಶೋಕ ಬಂಡಿ ಎಂಬ ವ್ಯಕ್ತಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ. ಅಲ್ಲದೇ ಗಣಿಯಲ್ಲಿ ಅಕ್ರಮವಾಗಿ 92 ಗುಂಡಿಗಳಲ್ಲಿ ಸಿಡಿಮದ್ದು ತುಂಬಿ, ಜಿಲಿಟಿನ್ ಕಡ್ಡಿಗಳನ್ನು ಇರಿಸಿ ಕಲ್ಲು ಸ್ಫೋಟಿಸಲು ಸಿದ್ಧತೆ ಮಾಡಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಇಂಡಿ ಡಿಎಸ್ಪಿ ಶ್ರೀಧರ ದೊಡ್ಡಿ ಗಣಿಗಾರಿಕೆ ಮೇಲೆ ದಾಳಿ ನಡೆಸಿ, ಭಾರಿ ಪ್ರಮಾಣದಲ್ಲಿ ನಡೆಯಲಿದ್ದ ಅಕ್ರಮ ಸ್ಫೋಟವನ್ನು ತಡೆದಿದ್ದಾರೆ ಎಂದು ಎಸ್ಪಿ ಅನುಪಮ ಅಗರವಾಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Related Articles
Advertisement
ಇದೇ ವೇಳೆ ಸ್ಫೋಟಕ್ಕೆ ಸಿದ್ಧಗೊಂಡಿರುವ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲು ಬೆಂಗಳೂರಿನಿಂದ ಬಾಂಬ್ ನಿಷ್ಕಯ ದಳದ ತಜ್ಞರು ಸ್ಥಳಕ್ಕೆ ಆಗಮಿಸಲಿದ್ದು, ಆ ಬಳಿಕವೇ ಸ್ಫೋಟಕದ ಸಾಮರ್ಥ್ಯ, ಪ್ರಮಾಣ, ಅಪಾಯದ ಸಂಭಾವ್ಯತೆಯಂಥ ಅಂಶಗಳು ಹೊರ ಬರಲಿವೆ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಗಳಿಂದ ಅಧಿಕೃತ ಪರವಾನಿಗೆ ಪಡೆದಿರುವ ಗಣಿಗಳಲ್ಲಿ ಲೈಸೆನ್ಸ್ ಇರುವ ಸ್ಫೋಟಕ ಸರಬರಾಜುದಾರರಿಂದ ಮಾತ್ರ ಸಿಡಿಮದ್ದು ಖರೀಸಬೇಕು. ಅಲ್ಲದೇ ಪರವಾನಿಗೆ, ಲೈಸೆನ್ಸ್ ಇದ್ದರೂ ಏಕಕಾಲಕ್ಕೆ 5-10 ಕ್ಕಿಂತ ಹೆಚ್ಚಿನ ಸ್ಪೋಟ ಮಾಡುವಂತಿಲ್ಲ. ಹೀಗೆ ಪ್ರತಿ ಹಂತದಲ್ಲೂ ಸೊಣಕನಹಳ್ಳಿ ಪ್ರದೇಶದ ಅಕ್ರಮ ಗಣಿಗಾರಿಕೆಯಲ್ಲಿ ಕಾನೂನು ಉಲ್ಲಂಘನೆ ಆಗಿದೆ ಎಂದು ವಿವರಿಸಿದರು.