Advertisement

ನಾಲ್ವರು ದರೋಡೆಕೋರರ ಬಂಧಿಸಿದ ಪೊಲೀಸರು

12:36 PM Jan 18, 2022 | Team Udayavani |

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಪಟ್ಟಣ ಕ್ರಾಸ್‌ನಿಂದ ಸ್ಟೇಷನ್‌ ಗಾಣಗಾಪುರದ ರಸ್ತೆ ಮತ್ತು ಆಳಂದ-ಕಲಬುರಗಿ ರಸ್ತೆಯ ಕೇಂದ್ರೀಯ ವಿಶ್ವವಿದ್ಯಾಲಯದ ಸಮೀಪ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ನಾಲ್ವರು ದರೋಡೆಕೋರರನ್ನು ಆಳಂದ ಪೊಲೀಸರು ಬಂಧಿಸಿದ್ದಾರೆ.

Advertisement

ತಂಬಾಕವಾ ಗ್ರಾಮದ ಜಗದೀಶ ಜಮಾದಾರ, ಕಮಕನೂರು ಗ್ರಾಮದ ಸೈಬಣ್ಣ (ಗೈಬಣ್ಣ) ತಳವಾರ, ಕಲಬುರಗಿಯ ಸಮತಾ ಕಾಲೋನಿಯ ಗಣೇಶ ಅಲಿಯಾಸ್‌ ಗಣುಸ್ವಾಮಿ ಹಿರೇಮಠ ಹಾಗೂ ಖಜೂರಿ ಗ್ರಾಮದ ಸಚಿನ್‌ ಬಂಗರಗಿ ಎಂಬುವವರೇ ಬಂಧಿತ ಆರೋಪಿಗಳು.

ಎರಡೂ ರಸ್ತೆಗಳಲ್ಲಿ ವಾಹನ ಸವಾರರ ದರೋಡೆ ಸಂಬಂಧ ನಿಂಬರ್ಗಾ ಮತ್ತು ನರೋಣಾ ಪೊಲೀಸ್‌ ಠಾಣೆಯ ಪ್ರತ್ಯೇಕ ಕೇಸ್‌ ದಾಖಲಾಗಿತ್ತು. ಈ ಸಂಬಂಧ ಎಸ್‌ಪಿ ಇಶಾ ಪಂತ್‌ ಹಾಗೂ ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರವೀಂದ್ರ ಶಿರೂರ ನೇತೃತ್ವದಲ್ಲಿ ಸಿಪಿಐ ಮಂಜುನಾಥ ಮತ್ತು ಪಿಎಸ್‌ಐಗಳಾದ ವಾತ್ಸಲ್ಯ ಹಾಗೂ ಮಹೆಬೂಬ್‌ ಹಾಗೂ ಸಿಬ್ಬಂದಿ ಪತ್ತೆ ಕಾರ್ಯ ನಡೆಸಿ, ನಾಲ್ವರು ಬಂಧಿಸಿದ್ದಾರೆ.

ಬಂಧಿತರಿಂದ 10 ಗ್ರಾಂ ಚಿನ್ನಾಭರಣ, 2 ಸಾವಿರ ರೂ. ನಗದು, ಮೂರು ಬೈಕ್‌ಗಳು ಹಾಗೂ ಮೊಬೈಲ್‌ ಸೇರಿ 2 ಲಕ್ಷ ರೂ.ಗಳ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next