Advertisement

ದರೋಡೆ ನಡೆದ ಕೆಲವೇ ಗಂಟೆಯಲ್ಲಿ ಆರೋಪಿಗಳ ಬಂಧಿಸಿದ ಪೊಲೀಸರು

11:33 AM Apr 21, 2017 | |

ಬೆಂಗಳೂರು: ವ್ಯಾಪಾರಿಯೊಬ್ಬರನ್ನು ಬೆದರಿಸಿ ಏಳು ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗುತ್ತಿದ್ದ ನಾಲ್ವರು ಆರೋಪಿಗಳನ್ನು ಯಶವಂತಪುರ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಗುಜರಾತ್‌ ಮೂಲದ ಅಹಮದ್‌ ಮೆಮನ್‌, ಆಸೀಂ, ಸುಹೈಲ್‌, ಮಕೀಬ್‌ ಪಠಾಣ್‌ ಬಂಧಿತರು. 

Advertisement

ಯಶವಂತಪುರ ಆರ್‌ಎಂಸಿ ಯಾರ್ಡ್‌ನಲ್ಲಿ ಬೇಳೆ ವ್ಯಾಪಾರಿಯಾಗಿರುವ ಗುಜರಾತ್‌ ಮೂಲದ ಟಾಡಾ ಅಶ್ವಕ್‌ ಸಗಟು ವ್ಯಾಪಾರಿಗಳಿಂದ ಹಣ ಸಂಗ್ರಹಿಸಿಕೊಂಡು ಬುಧವಾರ ರಾತ್ರಿ 1-30ರಲ್ಲಿ ದ್ವಿಚಕ್ರ ವಾಹನದಲ್ಲಿ ಎಚ್‌ಎಂಟಿ ಲೇಔಟ್‌ನಲ್ಲಿರುವ ಮನೆಗೆ ವಾಪಸಾಗುತ್ತಿರುಧಿವಾಗ ಬಿ.ಕೆ ನಗರ ಎರಡನೇ ಮುಖ್ಯರಸ್ತೆಯಲ್ಲಿ ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಅಲ್ಲದೆ, ಹಲ್ಲೆ ನಡೆಸಿ ಅವರ ಬಳಿಯಿದ್ದ 7.11ಲಕ್ಷ  ನಗದು ದೋಚಿ ಪರಾರಿಯಾದರು.

ಅಶ್ವಕ್‌ ಕೂಡಲೇ ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕಂಟ್ರೋಲ್‌ ರೂಂ ಸಿಬ್ಬಂದಿ ಪೊಲೀಸ್‌ ಠಾಣೆಗಳ ಸಿಬ್ಬಂದಿಗೆ ವಿಷಯ ತಲುಪಿಸಿದ್ದರು. ಇದರಿಂದ ರಾತ್ರಿ ಪಾಳಿ ಸೇವೆಯಲ್ಲಿದ್ದ ಪೊಲೀಸರು ಜಾಗೃತಗೊಂಡಿದ್ದರು. ಎಂಟನೇ ಮೈಲಿಯಲ್ಲಿ ರಾತ್ರಿ ಪಾಳಿ ಗಸ್ತಿನಲ್ಲಿದ್ದ ಬಾಗಲೂರು ಠಾಣೆ ಪೇದೆ ಅಶೋಕ್‌ ಹಾಗೂ ಗೃಹರಕ್ಷಕ ದಳ ಗಾರ್ಡ್‌ ಗೌತಮ್‌ ಅವರಿಗೂ ದರೋಡೆ ವಿಷಯ ಗೊತ್ತಾಗಿ ಅವರೂ ಎಚ್ಚರವಹಿಸಿದ್ದರು.

ಸ್ವಲ್ಪ ಸಮಯದ ನಂತರ ಆರೋಪಿ ಮಕೀಬ್‌ ಪಠಾಣ್‌ ಇದೇ ಮಾರ್ಗದಲ್ಲಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ. ಆತನನ್ನು ಹಿಡಿದುಕೊಂಡು ವಿಚಾರಣೆಗೊಳಪಡಿಸಿದಾಗ ವ್ಯಾಪಾರಿ ದರೋಡೆ ಪ್ರಕರಣದ ಬಗ್ಗೆ ಆತ ಬಾಯ್ಬಿಟ್ಟ. ಕೂಡಲೇ ಕಾರ್ಯಪ್ರವೃತ್ತರಾದ ಯಶವಂತಪುರ ಠಾಣೆ ಪೊಲೀಸರು ಉಳಿದ ಮೂವರು ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ್ದ ಹಣ ವಶಪಡಿಸಿಕೊಂಡರು.

ನಾಲ್ವರು ಆರೋಪಿಗಳು ಆರ್‌ಎಂಸಿ ಯಾರ್ಡ್‌ನಲ್ಲಿ ಲೆಕ್ಕಬರೆಯುವ ಕೆಲಸ ಮಾಡಿಕೊಂಡಿದ್ದಾರೆ. ದರೋಡೆಗೊಳಧಿಗಾಗಿದ್ದ ಅಶ್ವಕ್‌, ಪ್ರತಿದಿನ ಹಣ ಸಂಗ್ರಹ ಮಾಡಿಕೊಂಡು ಹೋಗುವ ಕುರಿತು ಆರೋಪಿಗಳು ಮಾಹಿತಿ ಪಡೆದುಕೊಂಡಿದ್ದರು. ಅದರಂತೆ ಬುಧವಾರ ರಾತ್ರಿ ದರೋಡೆ ಮಾಡಿದ್ದರು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next