ಕೋಟ: ಪ್ರವಾಹ ಸಂದರ್ಭ ಹಾಗೂ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರ್ವಹಿಸುತ್ತಿರುವ ಕಾರ್ಯ ನಿಜವಾಗಿ ಶ್ಲಾಘನೀಯ. ಆದ್ದರಿಂದ ಪೊಲೀಸ್ ಸಿಬಂದಿಗಳೇ ನಿಜವಾದ ಕೋವಿಡ್ ವಾರಿಯರ್ಸ್ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಅವರು ಆ. 11ರಂದು ಕೋಟದಲ್ಲಿ ಸುಮಾರು 75ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಪೊಲೀಸರ ಆರೋಗ್ಯ ರಕ್ಷಣೆ, ಸುವ್ಯವಸ್ಥಿತ ಠಾಣೆ, ಬಂಧಿಖಾನೆ ಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.
ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಸುನಿಲ್ ಕುಮಾರ್, ಸುಕುಮಾರ್ ಶೆಟ್ಟಿ, ಡಿ.ಸಿ. ಜಿ. ಜಗದೀಶ್, ಎಸ್.ಪಿ. ವಿಷ್ಣುವರ್ಧನ್, ಜಿ.ಪಂ. ಅಧ್ಯಕ್ಷ ದಿನಕರಬಾಬು, ಡಿ.ವೈ.ಎಸ್.ಪಿ. ಜಯಶಂಕರ್, ಜಿ.ಪಂ. ಸಿ.ಇ.ಒ. ಪ್ರೀತಿ ಗೆಹೊÉàಟ್, ಕ.ಅ. ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬ್ರಹ್ಮಾವರ ವೃತ್ತ ನಿರೀಕ್ಷಕ ಆನಂತಪದ್ಮನಾಭ, ಕೋಟ ಠಾಣಾಧಿಕಾರಿ ಸಂತೋಷ್, ತಾ.ಪಂ. ಸದಸ್ಯೆ ಲಲಿತಾ ಪೂಜಾರಿ, ಕೋಟ ಗ್ರಾ.ಪಂ. ಮಾಜಿ ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ, ಪ.ಪಂ. ಸದಸ್ಯ ರಾಜು ಪೂಜಾರಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ ಉಪಸ್ಥಿತರಿದ್ದರು.
ಹರೀಶ್ ಬಂಗೇರ ಪ್ರಕರಣದ ಕುರಿತು ಮನವಿ
ರಾಷ್ಟ್ರ ನಿಂದನೆ ಆರೋಪದಡಿ ಸೌದಿ ಅರಬಿಯಾದಲ್ಲಿ 8ತಿಂಗಳಿಂದ ಬಂಧನದಲ್ಲಿರುವ ಹರೀಶ್ ಬಂಗೇರನ ಬಿಡುಗಡೆಗೆ ಸಾಕಷಷ್ಟು ಹೋರಾಟ ನಡೆಸಿದರೂ ಇದುವರೆಗೆ ಪ್ರಯೋಜನವಾಗಿಲ್ಲ. ಈ ಕುರಿತು ಶೀಘ್ರವಾಗಿ ಕ್ರಮಕೈಗೊಳ್ಳಬೇಕು ಎಂದು ಕುಟುಂಬದವರು ಗೃಹಸಚಿವರಿಗೆ ಮನವಿ ಸಲ್ಲಿಸಿದರು.
ಜೂನ್‌ನಲ್ಲೇ ಕಾರ್ಯರಂಭ
ಕೋಟ ಪೊಲೀಸ್ ಠಾಣೆಯನ್ನು ಜೂ. 12ರಂದು ಹೋಮ ಹವನಗಳನ್ನು ನಡೆಸಿ, ಇಲಾಖೆಯ ಹಿರಿಯ ಅಧಿಕಾರಿಗಳು ದೀಪ ಬೆಳಗುವುದರ ಮೂಲಕ ಠಾಣೆಗೆ ಚಾಲನೆ ನೀಡಲಾಗಿತ್ತು. ಇದೀಗ 2ನೇ ಬಾರಿ ಗೃಹ ಸಚಿವರಿಂದ ಅಧೀಕೃತ ಉದ್ಘಾಟನೆ ನೆರವೇರಿದಂತಾಗಿದೆ.