ನವದೆಹಲಿ: ಭಾರತದ ಪಠ್ಯ ಪುಸ್ತಕಗಳಲ್ಲಿ 1975ರಲ್ಲಿನ ತುರ್ತು ಪರಿಸ್ಥಿತಿ ಮತ್ತು 1998ರಲ್ಲಿನ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಯ ಕುರಿತ ಪಾಠಗಳನ್ನು ಸೇರ್ಪಡೆಗೊಳಿಸಲು ಸಿದ್ಧತೆ ನಡೆದಿದ್ದು, ಈ ಕುರಿತು ವರದಿ ಪೂರ್ಣಗೊಂಡ ನಂತರ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಬಿಜೆಪಿ ಸಂಸದ, ಶಿಕ್ಷಣ ಸಚಿವಾಲಯ ಸಮಿತಿಯ ಅಧ್ಯಕ್ಷ ವಿನಯ್ ಸಹಸ್ರ ಬುದ್ಧೆ ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಮಾತುಕತೆ ಬೆನ್ನಲ್ಲೇ ಸಿಕ್ಕಿಂ ಗಡಿಯಲ್ಲಿ ಭಾರತ, ಚೀನಾ ಸೇನೆ ಘರ್ಷಣೆ; ಸೈನಿಕರಿಗೆ ಗಾಯ
ಇದಷ್ಟೇ ಅಲ್ಲದೇ, ಇತಿಹಾಸ ರಚನೆಯಲ್ಲಿ ಎನ್‌ಸಿಇ ಆರ್‌ಟಿ ಮತ್ತು ಐಸಿಎಚ್ ಆರ್ ಜತೆಗೂಡಿ ಕಾರ್ಯನಿರ್ವಹಿಸಬೇಕು ಹಾಗೂ, ಪಠ್ಯಪುಸ್ತಕಗಳಲ್ಲಿನ ಕೆಲ ನಿರ್ದಿಷ್ಟ ರೀತಿಯ ಇತಿಹಾಸಕಾರರ ಪ್ರಾಬಲ್ಯವನ್ನು ಕೊನೆಗೊಳಿಸಬೇಕು ಎಂದೂ ಅವರು ಹೇಳಿದ್ದಾರೆ.
ಇನ್ನು ಭಾರತೀಯ ಪಠ್ಯಪುಸ್ತಕಗಳಲ್ಲಿ ಉಲ್ಲೇಖಿಸಲಾಗುವ ಆರ್ಯನ್ ಅತಿಕ್ರಮಣ ಸಿದ್ಧಾಂತವು ಯಾವುದೇ ಸತ್ಯವನ್ನು ಆಧರಿಸಿಲ್ಲ ಎನ್ನುವುದು ಪತ್ತೆಯಾಗಿದೆ. ಹೀಗಾಗಿ, ಆ ಅಂಶವನ್ನು ಪಠ್ಯಗಳಿಂದ ತೆಗೆಯಬೇಕಾಗಿದೆ. ಇನ್ನು ಸರ ಸ್ವತಿ ನಾಗರಿಕತೆಯ ಬಗ್ಗೆ ಸಂಶೋಧನೆ ಆಗಿದ್ದು, ಆ ಅಂಶವನ್ನು ಪಠ್ಯಗಳಲ್ಲಿ ಅಳವಡಿಸಬೇಕಿದೆ ಎಂದು ಸಹಸ್ರಬುದ್ಧೆ ಹೇಳಿದ್ದಾರೆ.