Advertisement

POK: ಪಾಕ್‌ ದೌರ್ಜನ್ಯ; 3 ಸಾವು; ಸತತ 5ನೇ ದಿನವೂ ವ್ಯಾಪಕ ಹಿಂಸಾಚಾರ; ಸೇನೆಯಿಂದ ಗೋಲಿಬಾರ್‌

12:37 AM May 15, 2024 | Team Udayavani |

ಇಸ್ಲಾಮಾಬಾದ್‌: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾಕ್‌ ಸರಕಾರದ ವಿರುದ್ಧ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದ ಜನರು ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಸತತ 5ನೇ ದಿನವೂ ವ್ಯಾಪಕ ಪ್ರತಿಭಟನೆ ಮುಂದುವರಿದಿದ್ದು, ನಾಗರಿಕರ ಮೇಲೆ ಪಾಕ್‌ ಸೇನೆಯ ದೌರ್ಜನ್ಯ ಮಿತಿಮೀರಿದೆ.

Advertisement

ಮಂಗಳವಾರ ಪ್ರತಿಭಟನಕಾರರ ಮೇಲೆ ಪಾಕ್‌ ಸೇನೆ ಗೋಲಿಬಾರ್‌ ನಡೆಸಿದ್ದು, ಮೂವರು ಮೃತ ಪಟ್ಟು, 6 ಮಂದಿ ಗಾಯಗೊಂಡಿದ್ದಾರೆ. ಸಂಘರ್ಷ ದಲ್ಲಿ ಮೃತರ ಸಂಖ್ಯೆ 4ಕ್ಕೆ ಏರಿದೆ.

ಮೇ 10ರಿಂದ ಆರಂಭವಾಗಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಪಾಕ್‌ ಸರಕಾರವು ಪ್ರತಿಭಟನೆಗ್ರಸ್ತ ಪ್ರದೇಶದಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಿತ್ತು. ಈ ಪಡೆಗಳು ವಾಪಸಾಗುತ್ತಿದ್ದಂತೆ ಮತ್ತೆ ಹಿಂಸಾಚಾರ ನಡೆದಿದೆ.

ಅರೆ ಸೇನಾಪಡೆಗಳ 5 ಟ್ರಕ್‌ ಮತ್ತು 19 ಬೆಂಗಾವಲು ವಾಹನಗಳು ಖೈಬರ್‌ ಪಖು¤ಂಖ್ವಾ ಗಡಿಯ ಬ್ರಾರ್‌ಕೋಟ ಹಳ್ಳಿಯಿಂದ ಹೊರ ಹೋಗುವ ಬದಲು ಕೋಹಲಾ ಮೂಲಕ ತೆರಳುವ ಪ್ರಯತ್ನ ಮಾಡಿದವು. ಪಡೆಗಳು ಪಿಒಕೆ ರಾಜಧಾನಿ ಮುಜಪ#ರಾಬಾದ್‌ನ ಶೋರಾನ್‌ ದಾ ನಕ್ಕಾ ಹಳ್ಳಿಯನ್ನು ಸಮೀಪಿಸುತ್ತಿದ್ದಂತೆ ಕಲ್ಲುತೂರಾಟ ನಡೆಯಿತು. ಆಗ ಪಡೆಗಳು ಅಶ್ರುವಾಯು ಸಿಡಿಸಿ ಗುಂಡು ಹಾರಿಸಿದವು. ಬಳಿಕ ಪಡೆಗಳು ವೆಸ್ಟರ್ನ್ ಬೈಪಾಸ್‌ ಮೂಲಕ ನಗರವನ್ನು ಪ್ರವೇಶಿಸುತ್ತಿದ್ದಂತೆ ಮತ್ತೆ ಕಲ್ಲು ತೂರಾಟ ನಡೆಯಿತು. ಪ್ರತಿಭಟನಕಾರರನ್ನು ನಿಯಂತ್ರಿಸಲು ಮತ್ತೆ ಗುಂಡು ಹಾರಿಸಲಾಯಿತು. ಈ ವೇಳೆ ಕನಿಷ್ಠ ಮೂವರು ಮೃತಪಟ್ಟು 6 ಜನರು ಗಾಯಗೊಂಡಿದ್ದಾರೆ ಎಂದು ಸರ್ದಾರ್‌ ಅದ್ನಾನ್‌ ಖುರ್ಷಿದ್‌ ತಿಳಿಸಿದ್ದಾರೆ.

ಪ್ರತಿಭಟನಕಾರರು ಅರೆಸೇನಾ ಪಡೆಯನ್ನು ಬೆನ್ನುಹತ್ತಿ ಕಲ್ಲು ತೂರಾಟ ನಡೆಸುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಶವಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಸರಕಾರವು ಆರ್ಥಿಕ ನೆರವು ನೀಡಬೇಕು ಎಂದು ಜೆಎಎಸಿ ಒತ್ತಾಯಿಸಿದೆ.

Advertisement

ಬೆಲೆ ಇಳಿಕೆ ಮಾಡಿದ ಸರಕಾರ
ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಾಕ್‌ ಸರಕಾರವು 40 ಕೆ.ಜಿ. ಗೋಧಿ ಹಿಟ್ಟಿನ ಬೆಲೆಯನ್ನು 3,100 ಪಾಕಿಸ್ಥಾನಿ ರೂ.ಗಳಿಂದ 2,000 ರೂ.ಗೆ ಇಳಿಕೆ ಮಾಡಿದೆ. ಅದೇ ರೀತಿ, 100, 200 ಮತ್ತು 300ಕ್ಕಿಂತ ಅಧಿಕ ಯುನಿಟ್‌ ವಿದ್ಯುತ್‌ ಬಳಕೆಗೆ ಕ್ರಮವಾಗಿ ಪ್ರತೀ ಯುನಿಟ್‌ಗೆ 3 ರೂ., 5 ರೂ., 6 ರೂ. ಇಳಿಕೆ ಮಾಡಿದೆ. ಸೋಮವಾರ ಕೂಡ ಪಿಒಕೆಗಾಗಿ ಪ್ರಧಾನಿ ಶಹಬಾಜ್‌ ಷರೀಫ್ 2,300 ಕೋಟಿ ರೂ. ಪರಿಹಾರ ಘೋಷಣೆ ಮಾಡಿದ್ದರು.

ಪ್ರತಿಭಟನೆ ವಾಪಸ್‌?
ಬೆಲೆ ಇಳಿಕೆ ಪ್ರಕಟಿಸುತ್ತಿದ್ದಂತೆ ಪ್ರತಿಭಟನೆಯನ್ನು ವಾಪಸ್‌ ಪಡೆಯುವ ಕುರಿತು ನಿರ್ಧರಿಸಲಾಗುವುದು ಎಂದು ಜಮ್ಮು -ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ಮುಖ್ಯಸ್ಥ ಶೌಕತ್‌ ನವಾಜ್‌ ಮಿರ್‌ ಸೋಮವಾರ ಹೇಳಿದ್ದರು. ಪಿಒಕೆ ಬೇಡಿಕೆ ಕುರಿತಾದ ಸರಕಾರದ ಅಧಿಸೂಚನೆ ಮಂಗಳವಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಕೂಡ ಆಯಿತು. ಅಲ್ಲದೆ ಪ್ರತಿಭಟನಕಾರರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರಕಾರ ಒಪ್ಪಿಕೊಂಡಿದ್ದರಿಂದ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಅವರು ತಿಳಿಸಿದರು.

ವಿಶ್ವಸಂಸ್ಥೆಯಲ್ಲಿ ದನಿ ಎತ್ತಲು
ಕಾಶ್ಮೀರ ಬಿಜೆಪಿ ಘಟಕ ಆಗ್ರಹ
ಜಮ್ಮು: ಪಿಒಕೆಯಲ್ಲಿ ಪಾಕಿಸ್ಥಾನಿ ಸೇನೆ ನಡೆಸುತ್ತಿರುವ ದೌರ್ಜನ್ಯದ ಕುರಿತು ವಿಶ್ವ ಸಂಸ್ಥೆಯಲ್ಲಿ ಕೇಂದ್ರ ಸರಕಾರವು ದನಿ ಎತ್ತಬೇಕು ಎಂದು ಜಮ್ಮು -ಕಾಶ್ಮೀರದ ಬಿಜೆಪಿ ಘಟಕದ ಅಧ್ಯಕ್ಷ ರವಿಂದೇರ್‌ ರೈನಾ ಆಗ್ರಹಿಸಿದ್ದಾರೆ. ಜತೆಗೆ ಪಿಒಕೆ ಜನರಿಗೆ ಕೇಂದ್ರ ಸರಕಾರವು ರೇಷನ್‌ ಕಳುಹಿಸಿಕೊಡಬೇಕು ಎಂದಿದ್ದಾರೆ. ರಜೌರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪಿಒಕೆಯ ಜನರೊಂದಿಗೆ ಇದ್ದೇವೆ. ನಮ್ಮ ಸಹೋದರ-ಸಹೋದರಿಯರಾಗಿರುವ ಪಿಒಕೆ ಮಂದಿ ನಮ್ಮ ನಾಗರಿಕರು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next