Advertisement

ಯೋಧರ ಆಹಾರಕ್ಕೆ ವಿಷ?

12:30 AM Mar 03, 2019 | |

ಸೇನೆ ನೆಲೆಗಳಲ್ಲಿರುವ ಭಾರತೀಯ ಸೈನಿಕರಿಗಾಗಿ ಸರಬರಾಜಾಗುವ ಧವಸ, ಧಾನ್ಯ ಹಾಗೂ ಇನ್ನಿತರ ಆಹಾರ ಉತ್ಪನ್ನಗಳಿಗೆ ವಿಷ ಬೆರೆಸಲು ಪಾಕಿಸ್ಥಾನದ ಐಎಸ್‌ಐ ಸಂಚು ರೂಪಿಸಿದೆ ಎಂದು ಭಾರತದ ಗುಪ್ತಚರ ಇಲಾಖೆ ಬಹಿರಂಗಗೊಳಿಸಿದೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ. ಕಣಿವೆ ರಾಜ್ಯದಲ್ಲಿ ಗುಪ್ತವಾಗಿರುವ ಪಾಕಿಸ್ಥಾನದ ಐಎಸ್‌ಐ ಏಜೆಂಟರು, ಕಣಿವೆ ರಾಜ್ಯಗಳಲ್ಲಿನ ಯೋಧರ ಬಳಕೆಗಾಗಿ ಬರುವ ಆಹಾರ ಧಾನ್ಯಗಳಿಗೆ ವಿಷ ಬೆರೆಸುವ ಸಂಚು ಹೊಂದಿದ್ದಾರೆ ಎನ್ನಲಾಗಿದೆ. ಹಾಗಾಗಿ, ಯೋಧರಿಗೆ ಸರಬರಾಜಾಗುವ ಎಲ್ಲಾ ಧವಸ, ಧಾನ್ಯಗಳನ್ನು ಸಾಗಾಣಿಕೆಯ ಎಲ್ಲಾ ಹಂತಗಳಲ್ಲಿ ಕಟ್ಟುನಿಟ್ಟಾಗಿ ಪರೀಕ್ಷಿಸುವಂತೆ ಆದೇಶಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next