Advertisement

‘ಪೊಗರು’ ಚಿತ್ರದಲ್ಲಿ ಅರ್ಚಕ-ಪುರೋಹಿತರ ಅವಹೇಳನಕಾರಿ ಚಿತ್ರಣ: ಸಚ್ಚಿದಾನಂದ ಮೂರ್ತಿ ಖಂಡನೆ

11:57 AM Feb 21, 2021 | Team Udayavani |

ಬೆಂಗಳೂರು: ಪೊಗರು ಕನ್ನಡ ಚಲನಚಿತ್ರದಲ್ಲಿ ಅರ್ಚಕರು ಹಾಗೂ ಪುರೋಹಿತರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಿ ಪ್ರದರ್ಶಿಸುತ್ತಿರುವುದು ಖಂಡನೀಯ ಎಂದು ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ.

Advertisement

ಯಾವುದೇ ಜಾತಿ ಧರ್ಮವನ್ನು ಅವಹೇಳನಕಾರಿಯಾಗಿ ತೋರಿಸುವುದು ಸರಿಯಾದ ಕ್ರಮವಲ್ಲ ಅದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿದಂತಾಗುತ್ತದೆ ಎಂದಿರುವ ಚಿದಾನಂದಮೂರ್ತಿ ತಕ್ಷಣವೇ ಈ ದೃಶ್ಯವನ್ನು ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ.

ಇಡೀ ರಾಜ್ಯದಾದ್ಯಂತ ಇರುವ ಅರ್ಚಕರು ಹಾಗೂ ಪುರೋಹಿತರು ತೀವ್ರ ಬೇಸರಗೊಂಡಿದ್ದು ಸನಾತನ ಧರ್ಮದ ರಕ್ಷಕರಾದ ಇವರುಗಳನ್ನು ಅವಹೇಳನಕಾರಿಯಾಗಿ ಅವಮಾನಕಾರಿಯಾಗಿ ಚಿತ್ರಿಸಿರುವುದು ಸರಿಯಲ್ಲ. ಈ ಕೂಡಲೇ ಆ ದೃಶ್ಯವನ್ನು ತೆಗೆದು ಹಾಕಬೇಕು ಹಾಗೂ ಚಿತ್ರ ನಿರ್ಮಾಪಕರು ನಿರ್ದೇಶಕರು ಕ್ಷಮೆ ಕೋರಬೇಕು. ಇಲ್ಲದಿದ್ದರೆ ಮಂಗಳವಾರ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಅಲ್ಲದೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಯೋಚಿಸಲಾಗುತ್ತಿದೆ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ.

ಇದನ್ನೂ ಓದಿ:  ಹಾಸನ: ಟಾಟಾಸುಮೋ ಗೆ ಕ್ವಾಲಿಸ್ ಡಿಕ್ಕಿ; ಸ್ಥಳದಲ್ಲೇ ನಾಲ್ವರು ಸಾವು, 13 ಮಂದಿಗೆ ಗಂಭೀರ ಗಾಯ

 

Advertisement
Advertisement

Udayavani is now on Telegram. Click here to join our channel and stay updated with the latest news.

Next