Advertisement

ನಾಳೆಯಿಂದ ಕವಿಸಂ ಸಂಸ್ಥಾಪನಾ ದಿನಾಚರಣೆ

12:50 PM Jul 18, 2017 | Team Udayavani |

ಧಾರವಾಡ: ಕರ್ನಾಟಕ ವಿದ್ಯಾರ್ಧಕ ಸಂಘದ 128ನೇ ಸಂಸ್ಥಾಪನಾ ದಿನಾಚರಣೆ, ನವೀಕರಣಗೊಂಡ ಸಂಘದ ಪಾರಂಪರಿಕ ಕಟ್ಟಡ ಉದ್ಘಾಟನೆ, ಅಧ್ಯಕ್ಷರಾಗಿ ಪಾಪು-50 ವಿಚಾರ ಸಂಕಿರಣ, ಪಾಪು ಪುತ್ಥಳಿ ಅನಾವರಣ ಹಾಗೂ ಒಳನಾಡು-ಹೊರನಾಡು ಹಿರಿಯ ಕನ್ನಡ ಸಂಘಟನೆಗಳಿಗೆ ಗೌರವಾರ್ಪಣೆ ಕಾರ್ಯಕ್ರಮಗಳು ಜು.19 ಹಾಗೂ 20ರಂದು ಕವಿಸಂನಲ್ಲಿ ಜರುಗಲಿವೆ ಎಂದು ಕವಿಸಂ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು. 

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ| ಪಾಟೀಲ ಪುಟ್ಟಪ್ಪನವರು ಸಂಘದ ಅಧ್ಯಕ್ಷರಾಗಿ 50 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಜು.19ರಂದು ಬೆಳಗ್ಗೆ 10:30 ಗಂಟೆಗೆ “ಅಧ್ಯಕ್ಷರಾಗಿ ಪಾಪು-50′ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. 

ನಿವೃತ್ತ ಐಎಎಸ್‌ ಅಧಿಕಾರಿ ಡಾ|ಎಸ್‌.ಎಂ. ಜಾಮದಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಯಾಗಿ ಮೂಡಬಿದರೆ ಅಳ್ವಾಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷ ಮೋಹನ ಅಳ್ವ ಆಗಮಿಸಲಿದ್ದಾರೆ. ಈ ವಿಚಾರ ಸಂಕಿರಣದಲ್ಲಿ ಕನ್ನಡ ಉಸಿರಾಗಿ ಪಾಪು, ಪಾಪು ಸಾಹಿತ್ಯ, ಪಾಪು ಜೀವನ ಶೈಲಿ, ಪಾಪು ಹೋರಾಟದ ಜೀವನ, ಪಾಪು ಜಾತ್ಯತೀತತೆ, ವ್ಯಕ್ತಿ ಚಿತ್ರಣ, ಪಾಪು ಪತ್ರಿಕಾ ಭೀಷ್ಮ ಸೇರಿದಂತೆ ವಿವಿಧ ವಿಷಯಗಳ ಗೋಷ್ಠಿಗಳು ನಡೆಯಲಿವೆ ಎಂದರು.

ಅಂದು ಸಂಜೆ 4:00 ಗಂಟೆಗೆ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ನಡೆಯಲಿದ್ದು, ಅತಿಥಿಯಾಗಿ ಹೈದ್ರಾಬಾದ್‌ ನ ಮಾನು ವಿವಿ ನಿರ್ದೇಶಕ ಡಾ|ಕೆ.ಆರ್‌. ಇಕ್ಬಾಲ್‌ಅಹಮ್ಮದ ಆಗಮಿಸಲಿದ್ದು, ಹಿರಿಯ ಸಾಹಿತಿ ಪ್ರೊ|ಚಂದ್ರಶೇಖರ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6ಗಂಟೆಗೆ ನೃತ್ಯ ವೈಭವ, ನವಿಲೂರ ನಿಲ್ದಾಣ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಕವಿಸಂ ಸಂಸ್ಥಾಪನಾ ದಿನಾಚರಣೆ: ಜು.20ರಂದು ಬೆಳಗ್ಗೆ 10:30 ಗಂಟೆಗೆ ನಡೆಯುವ ಸಂಸ್ಥಾಪನಾ ದಿನಾಚರಣೆ, ಪಾರಂಪರಿಕ ಕಟ್ಟಡ ಉದ್ಘಾಟನೆ ಹಾಗೂ ಪಾಪು ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ವಿಜಯಪುರ ಜಾnನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

Advertisement

ಮಲ್ಲಿಕಾರ್ಜುನ ಸ್ವಾಮೀಜಿ, ನಿಜಗುಣಪ್ರಭು ಸ್ವಾಮೀಜಿ, ಬಸವಾನಂದ ಸ್ವಾಮೀಜಿ ಸಮ್ಮುಖ ವಹಿಸುವರು. ಅತಿಥಿಗಳಾಗಿ ಸಚಿವರಾದ ಬಸವರಾಜ ರಾಯರಡ್ಡಿ, ಉಮಾಶ್ರೀ, ವಿನಯ ಕುಲಕರ್ಣಿ, ಶಾಸಕ ಅರವಿಂದ ಬೆಲ್ಲದ, ಡಾ| ವೂಡೆ ಪಿ.ಕೃಷ್ಣ ಆಗಮಿಸುವರು. ಮಾಜಿ ಸಚಿವ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಅಂದು ಸಂಜೆ 4:00 ಗಂಟೆಗೆ 50 ವರ್ಷಗಳಿಗೂ ಅಧಿಕ ಕಾಲ ಕನ್ನಡಕ್ಕಾಗಿ ಶ್ರಮಿಸಿದ ಹೊರನಾಡು-ಒಳನಾಡು  ಸೇರಿದಂತೆ 12 ಕನ್ನಡ ಸಂಘಗಳಿಗೆ ಗೌರವ ಸನ್ಮಾನ ನಡೆಯಲಿದೆ. ಪುಣೆಯ ಕರ್ನಾಟಕ ಸಂಘ, ಮುಂಬಯಿಯ ಕರ್ನಾಟಕ ಸಂಘ, ಪುಣೆಯ ಕನ್ನಡ ಸಂಘ, ಚೆನೈ ಐನಾವರ ಕನ್ನಡ ಸಂಘ, ಕಾಂತಾವರದ ಕನ್ನಡ ಸಂಘ, ಶಿವಮೊಗ್ಗದ ಕರ್ನಾಟಕ ಸಂಘ, ಕಾಶಿಯ ಕರ್ನಾಟಕ ಸಂಘ, ಬರೋಡಾದ ಕರ್ನಾಟಕ ಸಂಘ, ಮಂಡ್ಯದ ಕರ್ನಾಟಕ ಸಂಘ, ಅಂಬರನಾಥದ ಕರ್ನಾಟಕ ವೈಭವ ಸಂಸ್ಥೆಗಳಿಗೆ ಗೌರವ ಸನ್ಮಾನ ನೀಡಲಾಗುವುದು.

ಸಂಜೆ 6:00ಗಂಟೆಗೆ ವೈವಿಧ್ಯಮಯ ನೃತ್ಯ ಹಾಗೂ ಕಾವ್ಯರಂಗ ನಾಟಕ ಪ್ರದರ್ಶನ ನಡೆಯಲಿದೆ ಎಂದರು. ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ, ಕೋಶಾಧ್ಯಕ್ಷ ಕೃಷ್ಣ ಜೋಶಿ, ಸಹ ಕಾರ್ಯದರ್ಶಿ ಶಿವಾನಂದ ಭಾವಿಕಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಮೋಹನ ನಾಗಮ್ಮನವರ, ಗುರು ಹಿರೇಮಠ, ಸತೀಶ ತುರಮರಿ, ಗುರು ತಿಗಡಿ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next