ಮುಂಬಯಿ: ಕವಿತೆಯೊಂದರಲ್ಲಿ ವಕ್ರತೆ ಬಹು ಮುಖ್ಯವಾದುದು. ವಕ್ರವಾಗಿ ದ್ದಾಗಲೇ ಅದು ಕವಿತೆ ಎನಿಸುವುದು. ಧಾವಂತದ ಈ ಮಹಾನಗರದಲ್ಲಿ ಸಾಂಸ್ಕೃತಿಕ ಆಸಕ್ತಿಯನ್ನು ಉಳಿಸಿ ಕೊಳ್ಳುವುದು ಕಷ್ಟವಿದ್ದರೂ, ಶ್ಯಾನ್‌ಭಾಗ್‌ರವರಂತಹ ಕವಿಗಳು ಕಾವ್ಯ ಪರಂಪರೆಯ ಜೊತೆ ಸಂವಾದ ನಡೆಸುತ್ತಿದ್ದಾರೆ, ಮುಖಾಮುಖೀ ಆಗಿದ್ದಾರೆ ಎನ್ನುವುದು ಸಂತೋಷದ ಸಂಗತಿಯಾಗಿದೆ ಎಂದು ಪ್ರಸಿದ್ಧ ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿ ಇವರು ನುಡಿದರು.
ಮೇ 27ರಂದು ಮಾಟುಂಗ ಕನ್ನಡ ಸಂಘ ಮುಂಬಯಿ ಮತ್ತು ಕವಿತಾ ಪ್ರಕಾಶನದ ಆಶ್ರಯದಲ್ಲಿ ಕನ್ನಡ ಸಂಘದ ಸಭಾಗೃಹದಲ್ಲಿ ನಗರದ ಕವಿ, ವಿಮರ್ಶಕ ವಿ. ಎಸ್. ಶ್ಯಾನ್‌ಭಾಗ್ ಅವರ “ಒದ್ದೆ ಬಳಪದ ಹಾದಿ’ ಕವನ ಸಂಕಲನ ಮತ್ತು “ಮುಂಬಯಿ ಎನ್ನುವ ಮಾನಸಿಕ ಕ್ರಿಯೆ’ ಲೇಖನಗಳ ಸಂಗ್ರಹ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಇವರು, ಇಲ್ಲಿನ ಕವಿತೆಗಳೆಲ್ಲ ಅಂತಧ್ವìನಿಗಳಾಗಿ ಬಂದಿವೆ. ಬರವಣಿಗೆ ಸಲೀಸು ಆಗಬಾರದು ಎನ್ನುತ್ತಾ, ಸಲೀಸು ಆದಾಗಲೆಲ್ಲ ಲೇಖಕ ಬೇರೆ ಮಾಧ್ಯಮದತ್ತ ಹೊರಳಿ ತನ್ನ ಸೃಜನಶೀಲತೆಯನ್ನು ಅಭಿವ್ಯಕ್ತಿಸುವ ಪ್ರಯತ್ನಕ್ಕೆ ತೊಡಗು ತ್ತಾನೆ. ಒಬ್ಬ ಸಾಹಿತಿಗೆ ಬಾಲ್ಯದ ನೆನಪುಗಳೇ ಮೂಲ ಬಂಡವಾಳ. ಆನಂತರ ಕವಿತೆಗಳು ಬೌದ್ಧಿಕವಾಗಿ ಹುಟ್ಟಿಕೊಂಡದ್ದು ಎಂಬ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬೇಕು ಎಂದರು.
“ಮುಂಬಯಿ ಎನ್ನುವ ಮಾನಸಿಕ ಕ್ರಿಯೆ’ ಕೃತಿಯನ್ನು ಪರಿಚಯಿಸಿದ ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ಅವರು, ಮುಂಬಯಿಯ ಚಿತ್ರಣವನ್ನು ಇಲ್ಲಿ ರೂಪಕಗಳ ಮೂಲಕ ಶ್ಯಾನ್ ಭಾಗ್ ಚಿತ್ರಿಸಿದ್ದಾರೆ. ಹಾಗೂ ಕಾಸೊ¾ಪೊಲಿಟನ್ ಸಂಸ್ಕೃತಿಯನ್ನು ನೆನಪಿಸುತ್ತಾರೆ. ಮುಂಬಯಿ ಶಹರ ವನ್ನು ಹೇಳುವುದೆಂದರೆ ಅದು ಆನೆ ಮುಟ್ಟಿದ ಕುರುಡನಂತೆ. ಮುಂಬಯಿ ಶಹರದಲ್ಲಿ ಮಾನಸಿಕ ಕ್ರಿಯೆಯ ರೂಪಕಗಳು ಇಲ್ಲಿ ಗಮನ ಸೆಳೆಯುತ್ತದೆ ಎಂದರು.
ಕೃತಿಕಾರ ವಿ. ಎಸ್. ಶ್ಯಾನ್‌ಭಾಗ್ ಅವರು ಮಾತನಾಡಿ, ತನ್ನ ಬರಹಗಳ ರಚನೆಗೆ ಮೂರು ದಶಕಗಳು ಕಳೆದಿವೆ. ಈ ತನಕ 6 ಕವನ ಸಂಕಲನಗಳು ಬಂದಿವೆ. ಕರ್ನಾಟದಲ್ಲೂ ಮುಂಬ ಯಿಯ ಸಾಹಿತಿಗಳು ಗುರು ತಿಸಿಕೊಳ್ಳುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ. ಎಸ್. ನಾಯಕ್ ಇವರು ಮಾತನಾಡಿ, ಶ್ಯಾನ್‌ಭಾಗ್‌ರಂತಹ ಹಿರಿಯ ಕವಿ, ಲೇಖಕರ ಕೃತಿ ಇಲ್ಲಿ ಬಿಡುಗಡೆ ಆಗುತ್ತಿರುವುದು ಸಂತೋಷದ ವಿಷಯವಾಗಿದೆ. ತಾನು ವೃತ್ತಿಯಿಂದ ನಿವೃತ್ತನಾಗಿದ್ದರೂ ಕನ್ನಡದ ಕೆಲಸಗಳಲ್ಲಿ ಆಸಕ್ತಿ ಉಳಿಸಿಕೊಂಡಿದ್ದೇನೆ. 82ನೇ ವರ್ಷಕ್ಕೆ ಮಾದಾರ್ಪಣೆ ಮಾಡಿರುವ ಈ ಸಂಘ ಮುಂಬಯಿಯ ಪ್ರಮುಖ ಸಂಘಗಳಲ್ಲಿ ಗುರುತಿಸಿಕೊಂಡಿದೆ. ಮುಂದೆಯೂ ಕನ್ನಡ ಸಂಘದ ಕೆಲಸಗಳು ನಿರಂತರವಾಗಿ ನಡೆಯಲಿದೆ. ಅದಕ್ಕಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಪದ್ಮನಾಭ ಸಿದ್ಧಕಟ್ಟೆ ಪ್ರಾರ್ಥನೆ ಗೈದರು. ಸೋಮನಾಥ ಸಿ. ಕರ್ಕೇರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕೃತಿಕಾರ ವಿ. ಎಸ್. ಶ್ಯಾನ್‌ಭಾಗ್ ಸ್ವಾಗತಿಸಿದರು. ಸುಬ್ರಾಯ ಚೊಕ್ಕಾಡಿ ಅವರ ಜೊತೆ ಸಂವಾದ ಕಾರ್ಯಕ್ರಮ ಜರಗಿತು. ತೇಜು ಪಬಿ¾ಕೇಶನ್ ಈ ಕೃತಿಗಳನ್ನು ಪ್ರಕಟಿಸಿತು. ಡಾ| ಸುನೀತಾ ಎಂ. ಶೆಟ್ಟಿ, ಕೆ. ಎಂ. ಕೋಟ್ಯಾನ್, ಪುರಂದರ ಸಾಲ್ಯಾನ್, ಡಾ| ಮಮತಾ ರಾವ್, ಮೊಗವೀರ ಸಂಪಾದಕ ಅಶೋಕ್ ಸುವರ್ಣ, ಶ್ರೀನಿವಾಸ ಜೋಕಟ್ಟೆ, ಡಾ| ವಿಶ್ವನಾಥ ಕಾರ್ನಾಡ್, ಕನ್ನಡ ಸೇನಾನಿ ಎಸ್. ಕೆ. ಸುಂದರ್, ಕರುಣಾಕರ ಹೆಜ್ಮಾಡಿ, ಕಮಲಾಕ್ಷ ಸರಾಫ್ ಮೊದಲಾದವರು ಉಪಸ್ಥಿತರಿದ್ದರು.