Advertisement

ಜ್ಞಾನಪೀಠ ಪುರಸ್ಕೃತ ಕವಿ ಅಕ್ಕಿಥಮ್ ಅಚ್ಯುತನ್ ನಂಬೂದಿರಿ ವಿಧಿವಶ

02:34 PM Oct 15, 2020 | keerthan |

ಪಾಲಕ್ಕಾಡ್: ಮಲಯಾಳಂ ಸಾಹಿತ್ಯದ ಮೇರು ಕವಿ ಜ್ಞಾನಪೀಠ ಪುರಸ್ಕೃತ ಕವಿ ಅಕ್ಕಿಥಮ್ ಅಚ್ಯುತನ್ ನಂಬೂದಿರಿ ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 94 ವರ್ಷದ ಅಚ್ಯುತನ್ ನಂಬೂದಿರಿ ತ್ರಿಶೂರ್ ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

Advertisement

1926ರಲ್ಲಿ ಪಾಲಕ್ಕಾಡ್ ನ ಕುಮಾರನಲ್ಲೂರ್ ನಲ್ಲಿ ಜನಿಸಿದ ನಂಬೂದಿರಿಯವರು ಮಲಯಾಳಂ ಸಾಹಿತ್ಯದಲ್ಲಿ ಮೇರು ಸಾಧನೆ ಮಾಡಿದವರು. ಆಕಾಶವಾಣಿಯಲ್ಲಿ ದಶಕಗಳ ಕಾಲ ಕೆಲಸ ಮಾಡಿದ ಅವರಿಗೆ 20189ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಅಚ್ಯುತನ್ ನಂಬೂದಿರಿಯವರು ಈವರೆಗೆ 55 ಕೃತಿಗಳನ್ನು ರಚಿಸಿದ್ದು, ಈ ಪೈಕಿ 45 ಕವನ ಸಂಕಲನಗಳಾಗಿವೆ. ಖಂಡ ಕಾವ್ಯಗಳು, ಕಥಾ ಕಾವ್ಯಗಳು, ಚರಿತ ಕಾವ್ಯಗಳು ಹಾಗೂ ಕವನಗಳು ಇವುಗಳಲ್ಲಿ ಸೇರಿವೆ. ಪದ್ಮಶ್ರೀ ಪುರಸ್ಕೃತರಾಗಿರುವ ಅವರು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1973), ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1972 ಮತ್ತು 1988), ಮಾತೃಭೂಮಿ ಪ್ರಶಸ್ತಿ, ವಯಲಾರ್‌ ಪ್ರಶಸ್ತಿ, ಕಬೀರ್‌ ಸಮ್ಮಾನ್‌ ಸೇರಿದಂತೆ ಅನೇಕ ಸಾಹಿತ್ಯ ಸಂಬಂಧಿ ಗೌರವಗಳಿಗೂ ಪಾತ್ರ ರಾಗಿದ್ದಾರೆ. ಇವರ ಕೃತಿಗಳು ಭಾರತದ ಇತರೆ ಭಾಷೆಗಳು ಹಾಗೂ ವಿದೇಶಿ ಭಾಷೆಗಳಿಗೂ ತರ್ಜುಮೆಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next