Advertisement
ಇಂದು ಸಂಜೆ 5ಗಂಟೆಗೆ ಭೇಟಿಯಾಗುವಂತೆ ಓ ಪನ್ನೀರ್ ಸೆಲ್ವಂಗೆ ರಾಜ್ಯಪಾಲರು ಅವಕಾಶ ನೀಡಿದ್ದರೆ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾಗೆ ಸಂಜೆ 7.30ಕ್ಕೆ ಸಮಯ ನೀಡಿದ್ದಾರೆ. ಅದೇ ರೀತಿ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವೀಟರ್ ನಲ್ಲಿ ಪನ್ನೀರ್ ಸೆಲ್ವಂ ಪರ ಅಭಿಯಾನ ಶುರುವಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ದಿ.ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪೋಯೆಸ್ ಗಾರ್ಡನ್ ನಿವಾಸದಲ್ಲಿ ವಾಸ್ತವ್ಯ ಹೂಡಿರುವ ವಿ.ಶಶಿಕಲಾ ನಟರಾಜನ್ ಅವರನ್ನು ಹೊರಹಾಕಲು ಪನ್ನೀರ್ ಸೆಲ್ವಂ ತಂತ್ರಗಾರಿಕೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಯಲಲಿತಾ ಅವರ ಪೋಯೆಸ್ ಗಾರ್ಡನ್ ನಿವಾಸ ಸ್ಮಾರಕವಾಗಬೇಕು ಎಂದು ಸಲಹೆ ನೀಡಿದ್ದಾರೆ. ಕೆಲವು ದಶಕಗಳ ಕಾಲದಿಂದ ಜೆ.ಜಯಲಲಿತಾ ಅವರ ನಿವಾಸದಲ್ಲೇ ಠಿಕಾಣಿ ಹೂಡಿದ್ದ ಶಶಿಕಲಾ ಇದೀಗ ಜಯಾ ನಿಧನದ ಬಳಿಕವೂ ಪೋಯೆಸ್ ಗಾರ್ಡನ್ ನಲ್ಲೇ ಉಳಿದುಕೊಂಡಿದ್ದಾರೆ.
Related Articles
ಶಶಿಕಲಾ ಅವರು ಸಿಎಂ ಗದ್ದುಗೆ ಏರದಂತೆ ತಡೆಯಲು ಇದೀಗ ಸಾಮಾಜಿಕ ಜಾಲತಾಣಗಳ ಬಳಕೆ ಆಗತೊಡಗಿದೆ. ಶಶಿಕಲಾರನ್ನು ಜಯಾ ನಿವಾಸದಿಂದ ಹೊರಹಾಕುವ ತಂತ್ರದ ಹಿನ್ನೆಲೆಯಲ್ಲಿ ಪನ್ನೀರ್ ಸೆಲ್ವಂ ಬೆಂಬಲಿಗರು ಅಣ್ಣಾ ಡಿಎಂಕೆ ಶಾಸಕರ ಮೊಬೈಲ್ ನಂ ಅನ್ನು ಸಾರ್ವಜನಿಕರಿಗೆ ನೀಡಿ ಜಯಾ ನಿವಾಸ ಸ್ಮಾರಕ ಮಾಡುವ ಒತ್ತಡ ಹೇರಲು ಮನವಿ ಮಾಡುತ್ತಿದ್ದಾರೆ. ಶಶಿಕಲಾ ವಿರುದ್ಧ ಟ್ವೀಟರ್, ಫೇಸ್ ಬುಕ್ ನಲ್ಲಿ ಕ್ಯಾಂಪೇನ್ ಶುರುವಾಗಿದೆ.
Advertisement
ಶಶಿಕಲಾ ವಿರುದ್ಧ ಕ್ರಮ ಕೈಗೊಳ್ಳಿ: ಪೊಲೀಸರಿಗೆ ಪನ್ನೀರ್ ಆದೇಶಎಐಎಡಿಎಂಕೆ ಪಕ್ಷದೊಳಗಿನ ಆಂತರಿಕ ಕಲಹ ತೀವ್ರವಾಗುತ್ತಿದ್ದು, ಜಯಾ ಬಹುಕಾಲದ ಗೆಳತಿ ಶಶಿಕಲಾ ಅವರು 131 ಶಾಸಕರನ್ನು ರಹಸ್ಯ ಸ್ಥಳದಲ್ಲಿ ಇಟ್ಟುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರು ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದಾರೆ.