Advertisement

Pocso Case: ಮುಖ್ಯ ಶಿಕ್ಷಕನಿಂದ ಅತ್ಯಾಚಾರ:13 ವರ್ಷದ ವಿದ್ಯಾರ್ಥಿನಿ ಗರ್ಭಿಣಿ

11:04 AM May 29, 2024 | Team Udayavani |

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಮುಖ್ಯ ಶಿಕ್ಷಕನೊಬ್ಬ ಅದೇ ಶಾಲೆಯ ವಿದ್ಯಾರ್ಥಿನಿ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿರುವ ಪರಿಣಾಮ ಅಪ್ರಾಪ್ತೆ ಗರ್ಭಿಣಿ ಆಗಿರುವ ವಿಷಯ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿಬೆಳಕಿಗೆ ಬಂದಿದೆ.

Advertisement

ಬಾಲಕಿ (13 ವರ್ಷ) ಈ ಬಾರಿ 7ನೇ ತರಗತಿ ಉತ್ತೀರ್ಣಳಾಗಿ 8ನೇ ತರಗತಿ ವ್ಯಾಸಂಗ ಮಾಡಬೇಕಿತ್ತು. ಆದರೆ, ಶಿಡ್ಲಘಟ್ಟ ತಾಲೂಕಿನ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕನಾಗಿರುವ ಜಿ. ವೆಂಕಟೇಶ್‌, ಬಾಲಕಿ ಮೇಲೆ ಕಳೆದ ಆರೇಳು ತಿಂಗಳಿಂದ ಅತ್ಯಾಚಾರ ಎಸೆಗಿದ್ದಾನೆ.

ಬೇಸಿಗೆ ರಜೆ ಇದ್ದ ಕಾರಣ ಬಾಲಕಿ ತಿಂಗಳಿಂದ ಮನೆಯಲ್ಲಿದ್ದು, ಆಕೆ ಮುಟ್ಟು ಆಗದಿದ್ದಕ್ಕೆ ಗಾಬರಿಗೊಂಡ ತಾಯಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗರ್ಭಿಣಿ ಆಗಿರುವ ವಿಷಯ ದೃಢಪಟ್ಟಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅತ್ಯಾಚಾರಕ್ಕೆ ಒಳಗಾದ ಬಾಲಕಿಯಿಂದ ದಿಬ್ಬೂರಹಳ್ಳಿ ಠಾಣೆಯ ಪಿಎಸ್‌ಐ ಶ್ಯಾಮಲಾ ಹೇಳಿಕೆ ಪಡೆದಿದ್ದು, ಮುಖ್ಯ ಶಿಕ್ಷಕ ಜಿ.ವೆಂಕಟೇಶ್‌ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿದ್ಯಾರ್ಥಿನಿ ಗರ್ಭಿಣಿ ಆಗಲು ಕಾರಣನಾದ ಮುಖ್ಯ ಶಿಕ್ಷಕ ಜಿ.ವೆಂಕಟೇಶ್‌ ವಿರುದ್ಧ ದಿಬ್ಬೂರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಿ.ಎಲ್‌.ನಾಗೇಶ್‌ ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next