Advertisement
Poco X3 Pro ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 860 SoC ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಇದು 5,160mAh ಬ್ಯಾಟರಿಯನ್ನು ಸಹ ಹೊಂದಿದೆ. ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದನ್ನು 48 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವು ಹೊಂದಿದೆ. ಗೋಲ್ಡನ್ ಬ್ರೌನ್ಸ್, ಗ್ರ್ಯಾಫೈಟ್ ಬ್ಲ್ಯಾಕ್, ಮತ್ತು ಸ್ಟೀಲ್ ಬ್ಲೂ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ Poco X3 Pro ಸಿಗಲಿದೆ.
Related Articles
Advertisement
Poco X3 Pro ಡ್ಯುಯಲ್ ಸಿಮ್ ಸ್ಲಾಟ್ ಗಳನ್ನು ಹೊಂದಿದೆ ಮತ್ತು ಆ್ಯಂಡ್ರಾಯ್ಡ್ 11 ನಲ್ಲಿ MIUI 12 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು 6.67-ಇಂಚಿನ ಫುಲ್-ಎಚ್ ಡಿ + (1,080×2,400 ಪಿಕ್ಸೆಲ್‌ಗಳು) ಡಿಸ್ಪ್ಲೇ , 120 ಹೆಚ್ ಡಿ ಡೈನಾಮಿಕ್ ರಿಫ್ರೆಶ್ ರೇಟ್, 240 ಹೆಚ್ ಡಿ ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ಅನ್ನು ಹೊಂದಿದೆ. Poco X3 Pro ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 860 SoC, ಜೊತೆಗೆ 8GB ವರೆಗೆ LPDDR4X RAM ಅನ್ನು ಹೊಂದಿದೆ. Poco X3 Pro 128 ಜಿಬಿ ಯು ಎಫ್ ಎಸ್ 3.1 ಸ್ಟೋರೇಜ್ ನ್ನು ಹೊಂದಿದೆ.
Poco X3 Pro ನಲ್ಲಿ 5,160 ಎಮ್ ಎ ಹೆಚ್ ಬ್ಯಾಟರಿ, ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ ಎಲ್ ಟಿ ಇ, ವೈ-ಫೈ, ಬ್ಲೂಟೂತ್ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್ ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಸೇರಿವೆ. Poco X3 Pro ನಲ್ಲಿ ಸೈಡ್-ಮೌಂಟೆಡ್ ಫಿಂಗರ್ ಪ್ರಿಂಟ್ ನ್ನು ಸೆನ್ಸಾರ್ ಸಹ ಹೊಂದಿ ಆಕರ್ಷಕವಾಗಿದೆ.