Advertisement

PNB ಹಗರಣ; ನೀರವ್ ಮೋದಿ ಸಹೋದರ ನೇಹಾಲ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ

09:47 AM Sep 14, 2019 | Team Udayavani |

ನವದೆಹಲಿ:ಪಂಜಾಬ್ ನ್ಯಾಶನಲ್ ಬ್ಯಾಂಕ್ ನಲ್ಲಿನ ವಂಚನೆ ಪ್ರಕರಣದಲ್ಲಿ ಈಗಾಗಲೇ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ಉದ್ಯಮಿ ನೀರವ್ ಮೋದಿ ಸಹೋದರ ನೆಹಾಲ್ ದೀಪಕ್ ಮೋದಿ ವಿರುದ್ಧ ಇಂಟರ್ ಪೋಲ್(ದ ಇಂಟರ್ ನ್ಯಾಷನಲ್ ಕ್ರಿಮಿನಲ್ ಪೊಲೀಸ್ ಆರ್ಗನೈಜೇಶನ್) ರೆಡ್ ಕಾರ್ನಾರ್ ನೋಟಿಸ್ ಜಾರಿಗೊಳಿಸಿದೆ.

Advertisement

ಬೆಲ್ಜಿಯಂ ಪ್ರಜೆಯಾಗಿರುವ 40ವರ್ಷದ ನೆಹಾಲ್ ದೀಪಕ್ ಮೋದಿ ಇದೀಗ ನ್ಯೂಯಾರ್ಕ್ ನಗರದಿಂದ ಬೇರೆಡೆ ತಲೆಮರೆಸಿಕೊಂಡಿರುವುದಾಗಿ ತನಿಖಾ ತಂಡ ತಿಳಿಸಿದೆ.

ವಜ್ರದ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ(13,500) ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾದ ಒಂದು ತಿಂಗಳ ಬಳಿಕ ಫೈಯರ್ ಸ್ಟಾರ್ ವಜ್ರದ ಕಂಪನಿ ಅಮೆರಿಕದಲ್ಲಿ ದಿವಾಳಿಗೆ ಅರ್ಜಿ ಹಾಕಿತ್ತು ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next