ಹೊಸದಿಲ್ಲಿ : ಪಂಜಾಬ್ ನ್ಯಾಶನಲ್ ಬ್ಯಾಂಕ್ ಬಹುಕೋಟಿ ಹಗರಣದ ಆರೋಪಿಯಾಗಿರುವ ವಜ್ರಾಭರಣ ಉದ್ಯಮಿ ಮೆಹುಲ್ ಚೋಕ್ಸಿ ಯನ್ನು ಭಾರತಕ್ಕೆ ಮರಳಿಸುವ ಬಗ್ಗೆ ಅಲ್ಲಿನ ಸರಕಾರದಿಂದ ‘ಕಾನೂನು ಸಮ್ಮತ ಕೋರಿಕೆ’ ಬಂದಲ್ಲಿ ಅದನ್ನು ಪರಿಗಣಿಸಬಹುದಾಗಿದೆ ಎಂದು ಆಂಟಿಗಾ ಸರಕಾರ ಹೇಳಿದೆ.
ಮೆಹುಲ್ ಚೋಕ್ಸಿ ಅವರು 13,500 ಕೋಟಿ ರೂ.ಗಳ ಪಿಎನ್‌ಬಿ ಹಗರಣದ ಮುಖ್ಯ ಆರೋಪಿಯಾಗಿರುವ ನೀರವ್ ಮೋದಿಯ ಚಿಕ್ಕಪ್ಪ. ಚೋಕ್ಸಿ ಪ್ರಕೃತ ಆಂಟಿಗಾ ದಲ್ಲಿ ಪೌರತ್ವ ಪಡೆದಿದ್ದಾರೆ.
ಆಂಟಿಗಾ ಚೀಫ್ ಆಫ್ ಸ್ಟಾಫ್ ಲಯೋನೆಲ್ “ಮ್ಯಾಕ್ಸ್ ‘ ಹರ್‌ಸ್ಟ್ ಅವರು ಭಾರತದಿಂದ ಕಾನೂನು ಪ್ರಕಾರದ ಕೋರಿಕೆಯು ಬಂದ ಪಕ್ಷದಲ್ಲಿ ಅದನ್ನು ಪರಿಗಣಿಸುವ ಎಲ್ಲ ಪ್ರಯತ್ನಗಳನ್ನು ಆಂಟಿಗಾ ಮತ್ತು ಬರ್‌ಬುಡಾ ಸರಕಾರ ಮಾಡಲಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿರುವುದನ್ನು ಉಲ್ಲೇಖೀಸಿ “ದ ಡೇಲಿ ಅಬ್ಸರ್ವರ್’ ವರದಿ ಮಾಡಿದೆ.
ಮೆಹುಲ್ ಚೋಕ್ಸಿ ಕಳೆದ ವರ್ಷ ನವೆಂಬರ್‌ನಲ್ಲಿ ಆಂಟಿಗಾ ಪೌರತ್ವ ಪಡೆದ ವಿಷಯ ಸಂಪುಟ ಸಭೆಯಲ್ಲಿ ಚರ್ಚೆಯಾದುದನ್ನು ಅನುಸರಿಸಿ, ಚೋಕ್ಸಿ ಅವರನ್ನು ಭಾರತಕ್ಕೆ ಮರಳಿಸುವ ವಿಚಾರದಲ್ಲಿ ಅಲ್ಲಿನ ಸರಕಾರದಿಂದ ಕಾನೂನು ಸಮ್ಮತ ಕೋರಿಕೆ ಬಂದ ಪಕ್ಷದಲ್ಲಿ ಅದನ್ನು ಪರಿಗಣಿಸಬಹುದಾಗಿದೆ ಎಂಬ ಹೇಳಿಕೆ ಹೊರ ಬಂದಿದೆ.
ಮೆಹುಲ್ ಚೋಕ್ಸಿ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡುವಂತೆ ಸಿಬಿಐ ಈಗಾಗಲೇ ಇಂಟರ್‌ಪೋಲನ್ನು ಕೋರಿದ್ದು ಸದ್ಯದಲೆಲà ಅದು ಮಂಜೂರಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.