Advertisement

ಬ್ಯಾಂಕ್‌ ಬಿಕ್ಕಟ್ಟು, NPA ಏರಿಕೆಗೆ ಕಾಂಗ್ರೆಸ್‌ ಕಾರಣ: ಬಿಜೆಪಿ

07:19 PM Mar 05, 2018 | udayavani editorial |

ಹೊಸದಿಲ್ಲಿ : 12,600 ಕೋಟಿ ರೂ.ಗಳ ಪಿಎನ್‌ಬಿ ಹಗರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ವಿರುದ್ಧ ವಾಕ್ಸಮರದಲ್ಲಿ ತೊಡಗಿರುವ  ಬಿಜೆಪಿ, “ಬ್ಯಾಂಕ್‌ ಸಾಲ ಬಿಕ್ಕಟ್ಟಿಗೆ ಮತ್ತು ಅನುತ್ಪಾದಕ ಸೊತ್ತುಗಳ ಏರಿಕೆಗೆ ಹಿಂದಿನ ಕಾಂಗ್ರೆಸ್‌ ಆಡಳಿತವೇ ಕಾರಣ” ಎಂದು ದೂರಿದೆ. 

Advertisement

“ದೇಶದ ಬ್ಯಾಂಕಿಂಗ್‌ ರಂಗದ ಸೋಲಿಗೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಮತ್ತು ಅದರ ಪ್ರಧಾನಿ, ಭಾರತೀಯ ಆರ್ಥಿಕತೆಯ ಸುಧಾರಣಾ ರೂವಾರಿ ಎನಿಸಿಕೊಂಡಿದ್ದ, ಡಾ. ಮನಮೋಹನ್‌ ಸಿಂಗ್‌ ಅವರೇ ಕಾರಣ; ಯುಪಿಎ ಆಡಳಿತೆಯಲ್ಲಿ ಸರಕಾರ ಬ್ಯಾಂಕಿಂಗ್‌ ನೀತಿ-ನಿಯಮಗಳನ್ನು ಪಾಲಿಸಲಿಲ್ಲ; ಬದಲಾಗಿ ಬ್ಯಾಂಕಿಂಗ್‌ ರಂಗದಲ್ಲಿ ಖುಷಿ ಬಂದಂತೆ ಹಸ್ತಕ್ಷೇಪ ನಡೆಸಿತು’ ಎಂದು  ಸಚಿವ ರವಿ ಶಂಕರ್‌ ಪ್ರಸಾದ್‌ ಅವರು ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದರು. 

ಯುಪಿಎ ಕಾಲದ ದೋಷಯುಕ್ತ ಚಿನ್ನ ಆಮದು ಯೋಜನೆಗೆ ವಿತ್ತ ಸಚಿವ ಚಿದಂಬರಂ ಅವರನ್ನು ದೂರಿದ ಸಚಿವ ಪ್ರಸಾದ್‌, “2014ರ ಮೇ 16ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದ ದಿನ ಚಿದಂಬರಂ ಅವರು ಗೀತಾಂಜಲಿ ಜೆಮ್ಸ್‌ ಸಹಿತವಾಗಿ 7 ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಪರವಾನಿಗೆಯನ್ನು ಮಂಜೂರು ಮಾಡಿದರು.

ಅಂದು ಮತ ಎಣಿಕೆ ನಿರ್ಣಾಯಕ ಹಂತಕ್ಕೆ ತಲುಪುತ್ತಿದ್ದಂತೆಯೇ ಯುಪಿಎ ಸರಕಾರ ಪತನಗೊಂಡು ಮೋದಿ ನೇತೃತ್ವದ ಬಿಜೆಪಿ ಅಧಿಕಾರದ ಗದ್ದುಗೆ ಏರಿತು. ಪರಾಜಿತವಾದ ಕಾಂಗ್ರೆಸ್‌ ಅಂದಿನಿಂದಲೂ ಬಿಜೆಪಿ ವಿರುದ್ಧ ಸುಳ್ಳುಗಳನ್ನು ಹೆಣೆಯುತ್ತಾ, ಜನರಲ್ಲಿ ಗೊಂದಲ, ಭಯ ಸೃಷ್ಟಿಸುತ್ತಾ ರಾಜಕೀಯ ಲಾಭ ಪಡೆಯಲು ಹವಣಿಸುತ್ತಾ ಬಂದಿದೆ. ನೀರವ್‌ ಮೋದಿ ಹಗರಣ ಯುಪಿಎ ಆಡಳಿತೆಯ ವೇಳೆಯಲ್ಲೇ ನಡೆದಿತ್ತು’ ಎಂದು ಹೇಳಿದರು. 
 

Advertisement

Udayavani is now on Telegram. Click here to join our channel and stay updated with the latest news.

Next