Advertisement

ಪಿಎಂಸಿ ವಿತ್‌ಡ್ರಾವಲ್‌ ಮಿತಿ 40 ಸಾವಿರ ರೂ.ಗೆ ಏರಿಕೆ

10:06 AM Oct 16, 2019 | sudhir |

ಮುಂಬಯಿ: ಬ್ಯಾಂಕಿಂಗ್‌ ನಿಯಮಾವಳಿಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಪಂಜಾಬ್‌ ಮತ್ತು ಮಹಾರಾಷ್ಟ್ರ ಕೋ. ಆಪ್‌ ಬ್ಯಾಂಕ್‌ (ಪಿಎಂಸಿ)ಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಮಂಗಳವಾರ ಕೇಂದ್ರೀಯ ರಿಸರ್ವ್‌ ಬ್ಯಾಂಕ್‌ ತುಸು ಸಡಿಲಗೊಳಿಸಿದೆ. ಇದರಿಂದಾಗಿ ಇನ್ನು ಗ್ರಾಹಕರು 40 ಸಾವಿರ ರೂ.ವರೆಗೆ ನಗದು ವಿತ್‌ಡ್ರಾಕ್ಕೆ ಅವಕಾಶ ಕಲ್ಪಿಸಲಾಗಿದೆ.

Advertisement

ಈ ಮೊದಲು ಸೆ.23ರವೇಳೆ ಆರ್‌ಬಿಐ 1 ಸಾವಿರ ರೂ.ವರೆಗೆ ಮಾತ್ರ ವಿತ್‌ಡ್ರಾಕ್ಕೆ ಅವಕಾಶ ಕಲ್ಪಿಸಿದ್ದು, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅನಂತರ ಈ ಮಿತಿಯನ್ನು 25 ಸಾವಿರ ರೂ.ಗಳಿಗೆ ಏರಿಸಲಾಗಿತ್ತು.

ವಿತ್‌ಡ್ರಾಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಹಕರು ಪ್ರತಿಭಟನೆ ನಡೆಸುತ್ತಿದ್ದು, ಇದೇ ವೇಳೆ ಗ್ರಾಹಕರೊಬ್ಬರು ಖಾತೆಯಲ್ಲಿ 90 ಲಕ್ಷ ರೂ. ಹಣವಿದ್ದರೂ ತೆಗೆಯಲಾರದೆ ಖನ್ನತೆ, ಉದ್ವೇಗದಿಂದ ಹೃದಯಾಘಾತಕ್ಕೆ ಒಳಗಾಗಿದ್ದರು.

ಈ ಪ್ರಕರಣ ನಡೆದ ಬೆನ್ನಲ್ಲೇ ಆರ್‌ಬಿಐ ಹೊಸ ಮಿತಿಯನ್ನು ಘೋಷಿಸಿದೆ.
ಅಲ್ಲದೇ ಮಿತಿಯನ್ನು ಹೆಚ್ಚಿಸಿದ್ದರಿಂದ ಶೇ.77ರಷ್ಟು ಮಂದಿ ತಮ್ಮ ಖಾತೆಯಲ್ಲಿದ್ದ ಸಂಪೂರ್ಣ ಹಣವನ್ನು ಪಡೆಯಬಹುದಾಗಿದೆ ಎಂದು ಅದು ಹೇಳಿದೆ. ಹಣಕಾಸು ಅಕ್ರಮ ನಡೆಯುವ ಸಾಧ್ಯತೆ ಕಾರಣದಿಂದ ನಿಬಂಧನೆಗಳನ್ನು ಹೇರಲಾಗಿತ್ತು. ಇದರಿಂದ ಗ್ರಾಹಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಆರ್‌ಬಿಐ ಗವರ್ನರ್‌ ಅವರೊಂದಿಗೆ ಮಾತುಕತೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next