Advertisement

ಇಂದು ಯೋಗ ದಿನ: ಡೆಹ್ರಾಡೂನ್‌ನಲ್ಲಿ ಮೋದಿ 

06:00 AM Jun 21, 2018 | Team Udayavani |

ನವದೆಹಲಿ/ಡೆಹ್ರಾಡೂನ್‌: ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಧಾನ ಕಾರ್ಯಕ್ರಮ ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್‌ನಲ್ಲಿ ನಡೆಯಲಿದೆ. ಅರಣ್ಯ ಸಂಶೋಧನಾ ಸಂಸ್ಥೆ (ಎಫ್ಆರ್‌ಐ)ಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. 

Advertisement

ಕಾರ್ಯಕ್ರಮಕ್ಕೆ ಪೂರಕವಾಗಿ ಬುಧವಾರ ಹೇಳಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಯೋಗ ಎನ್ನುವುದು ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇರುವ ಅಭ್ಯಾಸವಲ್ಲ. ಸುಲಭವಾಗಿ ಆರೋಗ್ಯ ಕಾಪಾಡಿಕೊಳ್ಳಲು ಇರುವ ಪಾಸ್‌ಪೋರ್ಟ್‌. ಅದರಿಂದಾಗಿ ನಮ್ಮ ದೈನಂದಿನ ಜೀವನ ಸುಗಮವಾಗಿ ಸಾಗುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಉತ್ತರಾಖಂಡ ಸಿಎಂ ಟಿ.ಎಸ್‌.ರಾವತ್‌ ಮುಖ್ಯ ಕಾರ್ಯಕ್ರಮವನ್ನು ಡೆಹ್ರಾಡೂನ್‌ನಲ್ಲಿ ಆಯೋಜಿಸಲು ನಿರ್ಧರಿಸಿದ್ದಕ್ಕೆ ಪ್ರಧಾನಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದೇ ವೇಳೆ ಯೋಗ ಗುರು ಸದ್ಗುರು ಜಗ್ಗಿ ವಾಸುದೇವ ರಾವ್‌ ಸಿಯಾಚಿನ್‌ನಲ್ಲಿ ಯೋಧರಿಗೆ ಯೋಗ ಪಾಠ ತಿಳಿಸಿಕೊಡಲಿದ್ದಾರೆ. ದೇಶ- ವಿದೇಶಗಳಲ್ಲಿ ಹಲವಾರು ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next