ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಭಾರೀ ಸಿದ್ಧತೆಯಲ್ಲಿರುವ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಆಯುಷ್ಮಾನ್ ಭಾರತ ಯೋಜನೆಯನ್ನು ರವಿವಾರ ದೇಶಾದ್ಯಂತ ಜಾರಿ ಮಾಡಲಿದೆ. ಝಾರ್ಖಂಡ್‌ನ ರಾಂಚಿಯಲ್ಲಿ ಪ್ರಧಾನಿ ಮೋದಿ ಅವರೇ ಚಾಲನೆ ನೀಡಲಿದ್ದಾರೆ. ಈ ಯೋಜನೆ ಮೂಲಕ ದೇಶದ 50 ಕೋಟಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಗುರಿ ಇದೆ. ಅಲ್ಲದೆ ಪ್ರತೀ ಕುಟುಂಬಕ್ಕೂ ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸಿಗಲಿದೆ. ಯೋಜನೆಗಾಗಿ ಪ್ರತಿ ಕುಟುಂಬಕ್ಕೆ ವಾರ್ಷಿಕ 2 ಸಾವಿರ ರೂ. ಕಂತು ಇರಲಿದ್ದು, ಇದರಲ್ಲಿ ಕೇಂದ್ರ ಸರಕಾರ ಶೇ. 60 ಮತ್ತು ರಾಜ್ಯ ಸರಕಾರ ಶೇ. 40 ಭರಿಸಲಿವೆ. ಎಲ್ಲ ರೂಪುರೇಷೆ ಸಿದ್ಧವಾಗಿದ್ದು, ಅಧಿಕೃತ ಆರಂಭವಷ್ಟೇ ಬಾಕಿ ಇದೆ. ಕರ್ನಾಟಕ ಸಹಿತ ಸದ್ಯ 26 ರಾಜ್ಯಗಳು ಇದಕ್ಕೆ ಒಪ್ಪಿಗೆ ನೀಡಿದ್ದು, ಉಳಿದವು ತಮ್ಮದೇ ಆರೋಗ್ಯ ಯೋಜನೆಗಳನ್ನು ಜಾರಿ ಮಾಡಿಕೊಂಡಿವೆ. ಯೋಜನೆಗೆ ಸೇರುವಂತೆ ಒಡಿಶಾ ಸರಕಾರಕ್ಕೂ ಕೇಂದ್ರ ಮನವಿ ಮಾಡಿದೆ.
ಫಲಾನುಭವಿಗಳು 10.74 ಕೋಟಿ
ಜಾರಿ ಎಲ್ಲೆಲ್ಲಿ ?
444 ಜಿಲ್ಲೆಗಳು,
26 ರಾಜ್ಯಗಳು
ನೋಂದಾಯಿತರು
9.4 ಕೋಟಿ