ರೋಮ್/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜಿ-20 ರಾಷ್ಟ್ರಗಳ ಸಮ್ಮೇಳನದ ನಡುವೆಯೇ ವಿವಿಧ ರಾಷ್ಟ್ರಗಳ ಮುಖ್ಯಸ್ಥರ ಜತೆಗೆ ಸಮಾಲೋಚನೆ ನಡೆಸಿದ್ದಾರೆ.
ಸ್ಪೇನ್ ಪ್ರಧಾನಿ ಪೆಡ್ರೋ ಸ್ಯಾನ್‌ಚೆ ಅವರ ಜತೆಗೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಾಂಧವ್ಯ ಸುಧಾರಣೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ. ಸ್ಪೇನ್‌ನಿಂದ 56 ಸಿ295 ವಿಮಾನಗಳ ಖರೀದಿ ಬಗ್ಗೆ ಚರ್ಚೆ ನಡೆಸಲಾಗಿದೆ.
ಅದರ ಪ್ರಕಾರ 40 ವಿಮಾನಗಳನ್ನು ಭಾರತದಲ್ಲಿ “ಮೇಕ್ ಇನ್ ಇಂಡಿಯಾ’ ಅನ್ವಯ ಟಾಟಾ ಅಡ್ವಾನ್ಸ್ ಸಿಸ್ಟಮ್’ ಅನ್ನು ಸಿದ್ಧಪಡಿಸಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಇದೇ ವೇಳೆ, ಶೃಂಗದ ಅಂತಿಮ ದಿನದ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಜಗತ್ತಿಗೆ 500 ಕೋಟಿ ಡೋಸ್ ಲಸಿಕೆ ನೀಡಲು ಬದ್ಧವಾಗಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:ಕೊಡಗಿನ ಹೆಮ್ಮೆಯ ಟೆನ್ನಿಸ್ ತಾರೆ ರೋಹನ್ ಬೋಪಣ್ಣಗೆ ರಾಜ್ಯೋತ್ಸವ ಪ್ರಶಸ್ತಿಯ ಕಿರೀಟ
ಜಿ-20 ರಾಷ್ಟ್ರಗಳ ಸಮ್ಮೇಳನದ ಬಳಿಕ ಪ್ರಧಾನಿ ಮೋದಿಯವರು ಜಿ-20 ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರ ಜತೆಗೆ ಜಗತ್ತಿನ ಪ್ರಮುಖ ಪ್ರವಾಸಿ ಸ್ಥಳವಾಗಿರುವ ಟ್ರೇವಿ ಕಾರಂಜಿಗೆ ಭೇಟಿ ನೀಡಿದ್ದಾರೆ. ಅಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೋದಿಯವರು ಇತರ ನಾಯಕರ ಜತೆಗೆ ನಾಣ್ಯವನ್ನು ಚಿಮ್ಮಿದರು. ಹೆಗಲಿನ ಮೂಲಕ ನಾಣ್ಯವನ್ನು ಕಾರಂಜಿಯ ನೀರಿಗೆ ಛಿಮ್ಮಿದರೆ ಮರಳಿಗೆ ರೋಮ್‌ಗೆ ವಾಪಸಾಗಲು ಸಾಧ್ಯ ಎಂಬ ನಂಬಿಕೆ ಇದೆ.