ಮೈಸೂರು: ಯಾರನ್ನೂ ರಾಜಕೀಯವಾಗಿ ಸಮಾಧಿ ಮಾಡಲು ಸಾಧ್ಯವಿಲ್ಲ. ಅವರು 10 ವರ್ಷ ಬಡವರ ಪರ ಕೆಲಸ ಮಾಡಿಲ್ಲ. ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರತಿಪಕ್ಷಗಳು ನನ್ನನ್ನು ಸಮಾಧಿ ಮಾಡಲು ಮುಂದಾಗಿವೆ ಎಂಬ ಪ್ರಧಾನಿ ಹೇಳಿಕೆಗೆ ಸಿಎಂ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ದೇಶದ ಪ್ರಧಾನ ಮಂತ್ರಿಯನ್ನು ಸೋಲಿಸಬೇಕು ಎಂಬುದು ವಿರೋಧ ಪಕ್ಷಗಳ ಬಯಕೆ. ಪ್ರಧಾನಿ ಸೋಲುವ ಭಯ, ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದರು.
ಪ್ರಧಾನಿ ಸುಳ್ಳಿನ ಸರದಾರ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಬಣ್ಣ ದೇಶದ ಜನರ ಮುಂದೆ ಎಕ್ಸ್ಪೋಸ್ ಆಗಿದೆ. ಈ ಹತಾಶೆಯಲ್ಲಿ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಇವರ ಎಮೋಷನಲ್ ಮಾತುಗಳು ಜನರಿಗೆ ಗೊತ್ತಿದೆ. ಮೇಲಕ್ಕೆ ಏರಿದವರು ಕೆಳಗೆ ಇಳಿಯಲೇಬೇಕು ಎಂದು ಹೇಳಿದರು.
ಸಾಲ ಮನ್ನಾ ಮಾಡಬೇಕು ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ಸಾಲ ಮನ್ನಾ ಮಾಡಿ ಎಂದು ಹಿಂದೆ ಕೇಳಿದಾಗ ಯಡಿಯೂರಪ್ಪ ಏನು ಹೇಳಿದ್ದರು ಗೊತ್ತಾ ? ನಮ್ಮ ಬಳಿ ಪ್ರಿಂಟಿಂಗ್ ಮಿಷನ್ ಇದಿಯಾ ಎಂದು ಕೇಳಿರಲಿಲ್ಲವೇ ? ಈಗ ಸಾಲಮನ್ನಾ ಮಾಡಿ ಎಂದು ಕೇಳುವ ನೈತಿಕತೆ ಇವರಿಗಿದಿಯೇ ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು.