Advertisement

Qatar;ಪ್ರಧಾನಿ ಮೋದಿ ಅವರಿಂದಲೇ ಎಲ್ಲ ಬೆಳವಣಿಗೆಗಳ ವೈಯಕ್ತಿಕ ಮೇಲ್ವಿಚಾರಣೆ

05:39 PM Feb 12, 2024 | Team Udayavani |

ಹೊಸದಿಲ್ಲಿ: ಕತಾರ್ ನಲ್ಲಿ ಬಂಧನಕ್ಕೊಳಗಾಗಿದ್ದ ಎಂಟು ಮಂದಿ ನೌಕಾಪಡೆಯ ನಿವೃತ್ತ ಯೋಧರನ್ನು ಬಿಡುಗಡೆ ಮಾಡಿಸಿ ಅವರನ್ನು ಮನೆಗೆ ಕರೆತರುವ ಪ್ರಯತ್ನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ “ವೈಯಕ್ತಿಕವಾಗಿ ಮೇಲ್ವಿಚಾರಣೆ” ಮಾಡಿದ್ದಾರೆ ಎಂದು ಕೇಂದ್ರ ಸರಕಾರ ಹೇಳಿದೆ.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ, “ಪ್ರಧಾನಿ ಅವರು ಈ ಪ್ರಕರಣದ ಎಲ್ಲಾ ಬೆಳವಣಿಗೆಗಳನ್ನು ವೈಯಕ್ತಿಕವಾಗಿ ನಿರಂತರವಾಗಿ ಮೇಲ್ವಿಚಾರಣೆ ಮಾಡಿದ್ದಾರೆ ಮತ್ತು ಭಾರತೀಯ ಪ್ರಜೆಗಳು ಸ್ವದೇಶಕ್ಕೆ ಮರಳುವುದನ್ನು ಖಚಿತಪಡಿಸುವ ಯಾವುದೇ ಉಪಕ್ರಮಗಳಿಂದ ಹಿಂದೆ ಸರಿಯಲಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Navy Veterans: 8 ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳನ್ನು ಬಿಡುಗಡೆ ಮಾಡಿದ ಕತಾರ್

ಎಂಟು ಮಂದಿ ಮರಳಿ ಬಂದಿರುವುದಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಅವರನ್ನು ಬಿಡುಗಡೆ ಮಾಡುವ ಕತಾರ್ ಸರಕಾರ ಮತ್ತು ಅಮೀರ್ ಅವರ ನಿರ್ಧಾರವನ್ನು ನಾವು ಆಳವಾಗಿ ಪ್ರಶಂಸಿಸುತ್ತೇವೆ. ಆ ಪೈಕಿ ಏಳು ಭಾರತೀಯ ಪ್ರಜೆಗಳು ಮರಳಿ ಬಂದಿರುವುದು ನಮಗೆ ಸಂತೋಷ ತಂದಿದೆ. 8 ನೇ ಭಾರತೀಯ ಪ್ರಜೆಯನ್ನು ಸಹ ಬಿಡುಗಡೆ ಮಾಡಲಾಗಿದೆ ಮತ್ತು ಭಾರತಕ್ಕೆ ಎಷ್ಟು ಬೇಗನೆ ಹಿಂದಿರುಗುವುದು ಸಾಧ್ಯ ಎಂದು ನೋಡಲು ನಾವು ಕತಾರ್ ಸರ್ಕಾರದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next