Advertisement

ಸೇನೆಗಳ ಆಡಳಿತ ಸುಧಾರಣೆಗೆ ಮೋದಿ ಸೂತ್ರ ಅನುಷ್ಠಾನಕ್ಕೆ ಚಾಲನೆ

08:11 AM Sep 15, 2021 | Team Udayavani |

ಹೊಸದಿಲ್ಲಿ: ಸೇನಾ ಪಡೆಗಳ ಆಡಳಿತ ಸುಧಾರಣೆಗಾಗಿ ಪ್ರಧಾನಿ ಮೋದಿ ಶಿಫಾರಸು ಮಾಡಿರುವ ಸೂತ್ರಗಳನ್ನು ಅನುಷ್ಠಾನಕ್ಕೆ ತರಲು ರಕ್ಷಣ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜ| ಬಿಪಿನ್‌ ರಾವತ್‌ ಮುಂದಡಿ ಇರಿಸಿದ್ದಾರೆ.

Advertisement

ಇದಕ್ಕಾಗಿ ಕಾರ್ಯಪಡೆಯೊಂದನ್ನು ರೂಪಿಸಲಾಗಿದೆ. ಇದರಲ್ಲಿ ರಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು, ಸೇನಾ ಪಡೆಗಳ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ ಭದ್ರತ ಪಡೆಯ ಕಾರ್ಯದರ್ಶಿಗಳು (ಎನ್‌ಎಸ್‌ಸಿಎಸ್‌) ಇದ್ದಾರೆ. ಇವರೆಲ್ಲರೂ ಸದ್ಯವೇ ಸಂಸತ್ತಿನ ಸೌತ್‌ ಬ್ಲಾಕ್‌ನಲ್ಲಿ ಸಭೆ ಸೇರಿ ಪ್ರಧಾನಿಯವರ ಆಶಯಗಳನ್ನು ಅನು ಷ್ಠಾನಗೊಳಿಸುವ ಬಗ್ಗೆ ರೂಪುರೇಷೆಗಳನ್ನು ನಿರ್ಧರಿಸಲಿದ್ದಾರೆ.

ಕಾರ್ಯಪಡೆ ಈ ಹಿಂದೆ ಸಭೆ ನಡೆಸಿ ಈ ಯೋಜನೆ ಜಾರಿ ಬಗ್ಗೆ ವರದಿ ಸಿದ್ಧಪಡಿಸಿದೆ. ಅದರ ಮುಖ್ಯಾಂಶಗಳನ್ನು ಪ್ರಧಾನಿ ಕಚೇರಿ ಮತ್ತು ರಕ್ಷಣ ಸಚಿವರ ಕಚೇರಿಗೆ ಸದ್ಯದಲ್ಲೇ ತಲುಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದೇ ಮಾರ್ಚ್‌ನಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಕಂಬೈನ್ಡ್ ಕಮಾಂಡರ್ ಕಾನ್ಫರೆನ್ಸ್‌ನಲ್ಲಿ ಈ ಎಲ್ಲ ಆಶಯಗಳನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖೀಸಿದ್ದರು.

ಮೋದಿ ಸೂತ್ರಗಳೇನು? :

  • ಸಂಪರ್ಕ ರಹಿತ ಯುದ್ಧತಂತ್ರಗಳನ್ನು ಹಿಮ್ಮೆಟ್ಟಿಸಲು ಸಿದ್ಧ ಮಾದರಿ ರೂಪಣೆ.
  • ಸೇನೆಯ ಸಾರ್ವಜನಿಕ ಸಹಭಾಗಿತ್ವ ವಿಭಾಗಗಳಲ್ಲಿ ಸುಧಾರಣೆ.
  • ದೇಶೀಯ ಶಸ್ತ್ರಾಸ್ತ್ರ ತಯಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವುದು.
  • ಸೇನೆಯಲ್ಲಿ ಸ್ಥಳೀಯ ಭಾಷೆಗಳಲ್ಲಿ ಸಂವಹನಕ್ಕೆ ಅವಕಾಶ ಕಲ್ಪಿಸುವುದು.
  • ಸೇನಾಧಿಕಾರಿಗಳು- ಸೈನಿಕರ ನಡುವೆ ನೇರ ಸಂವಹನಕ್ಕೆ ಅನುವು.
Advertisement

ಹೊಸ ಸವಾಲಿಗೆ ಉತ್ತರ :

ಸಂಪರ್ಕರಹಿತ ಯುದ್ಧ ಕೌಶಲಗಳನ್ನು ಹತ್ತಿಕ್ಕುವುದು ಒಂದು ಹೊಸ ಸವಾಲು. ಇಂದು ಶತ್ರುರಾಷ್ಟ್ರಗಳು ಸಾಂಪ್ರದಾಯಿಕ ಯುದ್ಧತಂತ್ರಗಳಿಗೆ ಬದಲಾಗಿ ಡ್ರೋನ್‌ಗಳ ಮತ್ತಿತರ ವಿಧಾನಗಳ ಮೂಲಕ ಛಾಯಾ ಸಮರ ನಡೆಸಲಾರಂಭಿಸಿವೆ. ಜತೆಗೆ ಸೈಬರ್‌ ಕಳವು, ದೇಶದ ಗುರುತರ ಮಾಹಿತಿ ಸೋರಿಕೆ, ಜನರ ಮನಃಸ್ಥಿತಿಯನ್ನು ನಾನಾ ಮಾರ್ಗಗಳಿಂದ ಕೆಡಿಸುತ್ತಿವೆ. ಇವೆಲ್ಲವನ್ನೂ ಸಮರ್ಥ ರೀತಿಯಲ್ಲಿ ಹತ್ತಿಕ್ಕಲು ವಿಸ್ತೃತ ತರಬೇತಿ, ಕೌಶಲಗಳನ್ನು ರೂಪಿಸಿ, ಸೈನಿಕರಿಗೆ ಒದಗಿಸುವ ಇರಾದೆ ಈ ತಂತ್ರಗಾರಿಕೆಯ ಹಿಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next