ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 71 ಸಾವಿರ ಮಂದಿ ಯುವಕರಿಗೆ ವಿವಿಧ ಸರ್ಕಾರಿ ಇಲಾಖೆಗಳ ನೇಮಕ ಪತ್ರ ವಿತರಿಸಲಿದ್ದಾರೆ.
Advertisement
ವರ್ಚುವಲ್ ಮೂಲಕ ನಡೆಯುವ ಕಾರ್ಯಕ್ರಮದಲ್ಲಿ ಹೊಸತಾಗಿ ಉದ್ಯೋಗ ಪಡೆದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದುವರೆಗೆ ಪ್ರಧಾನಿಯವರು 2.9 ಲಕ್ಷ ಮಂದಿಗೆ ನೇಮಕ ಪತ್ರ ವಿತರಿಸಿದ್ದಾರೆ.
71 ಸಾವಿರ ಮಂದಿಗೆ ಪ್ರಮಾಣ ಪತ್ರ ವಿತರಿಸಿದ ಬಳಿಕ ಉದ್ಯೋಗಪಡೆದವರ ಒಟ್ಟು ಸಂಖ್ಯೆ 3.6 ಲಕ್ಷ ಮಂದಿಗೆ ಏರಿಕೆಯಾಗಲಿದೆ.
ದೇಶದ ಒಟ್ಟು 45 ಸ್ಥಳಗಳಲ್ಲಿ “ಉದ್ಯೋಗ ಮೇಳ’ ನಡೆಯಲಿದೆ. ಕಳೆದ ವರ್ಷದ ಅಕ್ಟೋಬರ್ನಲ್ಲಿ ಪ್ರಧಾನಿ “ಉದ್ಯೋಗ ಮೇಳ’ ಆರಂಭಿಸಿದ್ದರು.