Advertisement

ಬ್ಯಾಂಕಾಕ್ ನಲ್ಲಿ ನಡೆಯಲಿರುವ ಆರ್ ಸಿಇಪಿ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ

09:46 AM Nov 05, 2019 | Nagendra Trasi |

ಬ್ಯಾಂಕಾಕ್: ಬ್ಯಾಂಕಾಕ್ ನಲ್ಲಿ ನಡೆಯಲಿರುವ 16 ರಾಷ್ಟ್ರಗಳ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ(ಆರ್ ಸಿಇಪಿ) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪಾಲ್ಗೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ಅಸಿಯಾನ್ ರಾಷ್ಟ್ರಗಳ ಸಮಾವೇಶದ ಅಂತ್ಯದಲ್ಲಿ ಆರ್ ಸಿಇಪಿ ಶೃಂಗ ಸಭೆಯ ನಡೆಯಲಿದೆ. ಈ ಸಭೆ ಕೆಲವು ದಿನಗಳ ಕಾಲ ನಡೆಯುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ.

ಪ್ರಸ್ತಾವಿತ ಆರ್ ಸಿಇಪಿ ಕರಡಿನ ಪ್ರಕಾರ ಹತ್ತು ಅಸಿಯಾನ್ ರಾಷ್ಟ್ರಗಳ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದ ಇದಾಗಿದೆ. ಇದರಲ್ಲಿ ಬ್ರೂನೈ, ಕಾಂಬೋಡಿಯಾ, ಇಂಡೋನೇಷಿಯಾ, ಮಲೇಷ್ಯಾ, ಮ್ಯಾನ್ಮಾರ್, ಸಿಂಗಾಪೂರ್, ಥಾಯ್ ಲ್ಯಾಂಡ್, ಫಿಲಿಫ್ಪೀನ್ಸ್, ಲಾವೋಸ್ ಮತ್ತು ವಿಯೆಟ್ನಾಂ ಹಾಗೂ ಮುಕ್ತ ವ್ಯಾಪಾರ ಒಪ್ಪಂದದ ಪಾಲುದಾರ ದೇಶಗಳಾದ ಚೀನಾ, ಜಪಾನ್, ಇಂಡಿಯಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಕೂಡಾ ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next