ನವ ದೆಹಲಿ : ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯ ನೆನಪಿಗಾಗಿ ಜನವರಿ 23 ರಂದು ನಡೆಯುವ ‘ಪರಾಕ್ರಮ್ ದಿವಸ್’ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಾಗೆ ಭೇಟಿ ನೀಡಲಿದ್ದಾರೆ.
ಅದೇ ಸಂದರ್ಭದಲ್ಲಿ ಪ್ರಧಾನಿ, ಅಸ್ಸಾಂನ ಶಿವಸಾಗರದಲ್ಲಿರುವ ಜೆರೆಂಗಾ ಪಠಾರ್‌ಗೆ ಭೇಟಿ ನೀಡಿ, 1.06 ಲಕ್ಷ ಭೂ ಪಟ್ಟಾ ಹಂಚಿಕೆ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಖಚಿತ ಪಡಿಸಿದೆ.
ಇದನ್ನೂ ಓದಿ : ಭಾರತದಲ್ಲಿ ಬಿಎಂಡಬ್ಲ್ಯು3 ಸೀರೀಸ್ ಗ್ರಾನ್ ಲಿಮೋಸಿನ್ ಬಿಡುಗಡೆ
ಜನವರಿ 23 ರಂದು ಕೋಲ್ಕತ್ತಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ಬಿಜೆಪಿಯ ರಾಜ್ಯ ಘಟಕವು ಪ್ರಧಾನಿ ನರೇಂದ್ರ ಮೋದಿಯವರನ್ನು ಕೋರಿತ್ತು. ಅದಕ್ಕೆ ಸರಿಹೊಂದುವಂತೆ ವೇಳಾಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ನೇತಾಜಿ ಸುಭಾಸ್ ಚಂದ್ರ ಅವರ ಜನ್ಮದಿನವನ್ನು ಪ್ರತಿವರ್ಷ ಜನವರಿ 23 ರಂದು ‘ಪರಾಕ್ರಮ್ ದಿವಸ್’ ಎಂದು ಆಚರಿಸಲಾಗುವುದು ಎಂದು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇತ್ತೀಚೆಗೆ ಘೋಷಿಸಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಹೇಳಿತ್ತು. “ನೇತಾಜಿಯ ಅದಮ್ಯ ಮನೋಭಾವ ಮತ್ತು ದೇಶಕ್ಕೆ ನೀಡಿದ ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ಸಲುವಾಗಿ, ಪ್ರತಿ ವರ್ಷ ಅವರ ಜನ್ಮದಿನವನ್ನು (ಜ. 23) ‘ಪರಾಕ್ರಂ ದಿವಸ್’ ಎಂದು ಅರ್ಪಿಸಲು ಸರ್ಕಾರ ನಿರ್ಧರಿಸಿದೆ. “ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯಲ್ಲಿ ಈ ಮಹಾನ್ ವ್ಯಕ್ತಿ, ದೇಶಕ್ಕೆ ಸಲ್ಲಿಸಿದ ಸರಿಸಾಟಿಯಿಲ್ಲದ ಕೊಡುಗೆಯನ್ನು ಭಾರತದ ಜನರು ಪ್ರೀತಿಯಿಂದ ಸ್ಮರಿಸುತ್ತಾರೆ. ನೇತಾಜಿಯ 125 ನೇ ಜನ್ಮ ವರ್ಷಾಚರಣೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಣೆಯಿಂದ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ : ನಲುಗಿದ ಆರ್ಥಿಕತೆಗೆ ಆತ್ಮನಿರ್ಭರ ಭಾರತ ಸಂಜೀವಿನಿ
ಈಗಾಗಲೇ ದೆಹಲಿಯ ಕೆಂಪು ಕೋಟೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೇಲೆ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ, ಇದನ್ನು 2019ರ ಜನವರಿ 23 ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ‘ಪರಾಕ್ರಂ ದಿವಸ್’ ಆಚರಣೆಯ ಮುಂಚಿತವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನ ತೇಜ್ಪುರ್ ವಿಶ್ವವಿದ್ಯಾಲಯದ 18 ನೇ ಸಮಾವೇಶದಲ್ಲಿ ಬೆಳಿಗ್ಗೆ(ಜ.22) 10.30 ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಅಸ್ಸಾಂ ರಾಜ್ಯಪಾಲ ಜಗದೀಶ್ ಮುಖಿ, ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹಾಜರಿರಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : ನಲುಗಿದ ಆರ್ಥಿಕತೆಗೆ ಆತ್ಮನಿರ್ಭರ ಭಾರತ ಸಂಜೀವಿನಿ