Advertisement
ಸಂವಿಧಾನವೇ ನಮ್ಮ ಧರ್ಮಗ್ರಂಥ ಎಂದು ಈಗ ಹೇಳುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೇವೆಂದುನಿ ಬಿಜೆಪಿಯವರು ಹೇಳಿದ್ದರು. 400 ಸ್ಥಾನ ಕೊಟ್ಟರೆ ಸಂವಿಧಾನ ಬದಲಾವಣೆ ಮಾಡುತ್ತೇವೆಂದು ಮೋಹನ್ ಭಾಗವತ್ ಕೂಡ ಹೇಳಿದ್ದಾರೆ ಎಂದರು.
Related Articles
Advertisement
ಮೋದಿ ಹತ್ತು ವರ್ಷದಲ್ಲಿ ಜನರ ಮನಸ್ಸು ಹಾಳು ಮಾಡಿದ್ದಾರೆ. ದೇಶ ಒಡೆಯುವ ಕೆಲಸ ಬಿಜೆಪಿಯರು ಮಾಡಿದ್ದಾರೆ. ಆದರೆ ಜನರ ಮನಸ್ಸು ಕೂಡಿಸುವ ಸಲುವಾಗಿ ರಾಹುಲ್ ಗಾಂಧಿ ಪಾದಯಾತ್ರೆ, ನ್ಯಾಯಯಾತ್ರೆ ಮಾಡಿದರು. ಇದರಿಂದ 25 ಗ್ಯಾರಂಟಿಗಳನ್ನು ರಾಹುಲ್ ಗಾಂಧಿ ಜಾರಿ ಮಾಡಿದ್ದಾರೆ. ನಾವು ತಿಂಗಳಿಗೆ ಮಹಿಳೆಗೆ ಎರಡು ಸಾವಿರ ಕೊಟ್ಟರೆ ಅವರು ಬಡ ಕುಟುಂಬದ ಮಹಿಳೆಗೆ ಒಂದು ಲಕ್ಷ ಕೊಡ್ತೇವಿ ಅಂದಿದ್ದಾರೆ. ಯುವ ನ್ಯಾಯ ಎಂದು ನಿರುದ್ಯೋಗಿ ಯುವಕರಿಗೆ ಒಂದು ಲಕ್ಷ ಕೊಡುತ್ತೇನೆ ಅಂದಿದ್ದಾರೆ ಎಂದರು.
ರೈತರಿಗೆ ಸಹಾಯ ಮಾಡಲು ರೈತ ನ್ಯಾಯ ಹೆಸರಲ್ಲಿ ರೈತರ ಸಾಲಾ ಮನ್ನಾ ಮಾಡುತ್ತೇವೆ. ನರೇಂದ್ರ ಮೋದಿಯವರು ವರೆಗೂ ಒಂದು ರೂಪಾಯಿ ರೈತರ ಸಾಲ ಮನ್ನಾ ಮಾಡಿಲ್ಲ. ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡಿಲ್ಲ. ಇವರು ಅಂಬಾನಿ, ಅದಾನಿಯವರ ಸಾಲ ಮನ್ನಾ ಮಾಡಿದರು. ಉಗ್ರಪ್ಪನವರು ಕೌನ್ಸಿಲ್ ನಲ್ಲಿ ಯಡಿಯೂರಪ್ಪನವರಿಗೆ ಸಾಲ ಮನ್ನಾ ಮಾಡಿ ಎಂದಾಗ ಯಡಿಯೂರಪ್ಪ ನಮ್ಮ ಬಳಿ ನೋಟ್ ಪ್ರಿಂಟ್ ಮಾಡುವ ಮಷೀನ್ ಇಲ್ಲ ಎಂದು ಹೇಳಿದ್ದರು. ಅವರ ಹೇಳಿಕೆ ದಾಖಲೆಯಲ್ಲಿದೆ. ತೇಜಸ್ವಿ ಸೂರ್ಯ ರೈತರ ಸಾಲಮನ್ನಾ ಮಾಡೋದ್ರಿಂದ ದೇಶಕ್ಕೆ ಒಳ್ಳೆಯದಾಗಲ್ಲ ಎಂದಿದ್ದಾರೆ. ರೈತರ ಸಾಲ ಮನ್ನಾ ಮಾಡಬಾರದು ಎನ್ನುವುದು ಬಿಜೆಪಿಯ ಹಿಡನ್ ಅಜೆಂಡಾ ಎಂದು ಸಿಎಂ ಗುಡುಗಿದರು.
ದೇವೇಗೌಡರು ದೇಶ ಬಿಟ್ಟರೆ?: ಜೆಡಿಎಸ್‌ನವರು ಈ ಮೊದಲು ಕಮ್ಯುನಲ್ ಪಾರ್ಟಿ ಎಂದು ಹೇಳ್ತಿದ್ದರು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆಗೆ ಸೇರಲ್ಲ ಎನ್ನುತ್ತಿದ್ದರು. ಮೋದಿ ಪ್ರಧಾನಿ ಆಗಲ್ಲ, ಆದರೆ ನಾನು ದೇಶ ಬಿಟ್ಟು ಹೋಗುತ್ತೇನೆಂದು ಗೌಡರು ಹೇಳುತ್ತಿದ್ದರು. ಮೋದಿ ಪ್ರಧಾನಿ ಆದ ಬಳಿಕ ದೇವೆಗೌಡರು ದೇಶ ಬಿಟ್ಟು ಹೋದರೆ ಎಂದು ಸಿಎಂ ಪ್ರಶ್ನಿಸಿದರು.
ರೇವಣ್ಣನ ವಿಡಿಯೋಗಳು ನಾಲ್ಕೈದು ವರ್ಷಗಳ ಹಿಂದಿನದು ಎಂಬ ಸಿಟಿ ರವಿ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಸಿ.ಟಿ ರವಿ ಸುಳ್ಳು ಹೇಳುತ್ತಿದ್ದಾರೆ ಎಂದರು.
ವಿಡಿಯೋ ನಾಲ್ಕೈದು ವರ್ಷಗಳ ಹಿಂದಿನದು ಎಂದು ಸಿಟಿ ರವಿ ಹೇಳಿರಬಹುದು. ಆದರೆ ಆಗ ಯಾವ ಸಂತ್ರಸ್ತೆ ಕಂಪ್ಲಿಟ್ ಕೊಟ್ಟಿರಲಿಲ್ಲ, ಈಗ ಕೊಟ್ಟಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಪ್ರಜ್ವಲ್ ರೇವಣ್ಣನಿಗೆ ಸೇರಿದ ಅಶ್ಲೀಲ ವಿಡಿಯೋಗಳಿವೆ ಸಂಗತಿ ಗೊತ್ತಿದ್ದರೂ ಬಿಜೆಪಿಯವರು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡರು. ಅಲ್ಲದೇ ಪ್ರಜ್ವಲ್ ರೇವಣ್ಣನಿಗೂ ಮೈತ್ರಿ ಅಭ್ಯರ್ಥಿ ಎಂದು ಟಿಕೆಟ್ ಕೊಟ್ಟಿದ್ದಾರೆ. ಸಾಲದೆಂಬಂತೆ ಪ್ರಜ್ವಲ್ ಪರವಾಗಿ ಮೋದಿ ಹಾಗೂ ಅಮಿತ್ ಶಾ ಪ್ರಚಾರ ನಡೆಸಿದ್ದಾರೆ ಎಂದ ಸಿಎಂ, ಪ್ರಜ್ವಲ್ ರೇವಣ್ಣ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.