Advertisement

ಇಸ್ಕಾನ್‌ಗೆ ಮೋದಿ ಅಭಿನಂದನೆ

11:02 PM Sep 01, 2021 | Team Udayavani |

ನವದೆಹಲಿ: “”ಜಗತ್ತಿನಾದ್ಯಂತ ಇರುವ ಇಸ್ಕಾನ್‌ ದೇಗುಲಗಳು, ತಮ್ಮ ಮೂಲಕ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಹರಡುತ್ತಿವೆ. ಉತ್ಸಾಹ ಹಾಗೂ ಮಾನವೀಯತೆಯ ಪರಮೋತ್ಛ ಸ್ಥಿತಿಯೇ ನಂಬಿಕೆ ಎಂಬುದನ್ನು ಇಡೀ ವಿಶ್ವಕ್ಕೆ ಇಸ್ಕಾನ್‌ ಸಂಸ್ಥೆ ಮನವರಿಕೆ ಮಾಡಿಕೊಟ್ಟಿವೆ” ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

Advertisement

ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆಯ (ಇಸ್ಕಾನ್‌) ಸಂಸ್ಥಾಪಕರಾದ ಶ್ರೀ ಶ್ರೀಮದ್‌ ಭಕ್ತಿವೇದಾಂತ ಪ್ರಭುಪಾದರ 125ನೇ ಜನ್ಮದಿನೋತ್ಸವದ ಸ್ಮರಣೆಗಾಗಿ ಕೇಂದ್ರ ಸರ್ಕಾರ ತಯಾರಿಸಿರುವ 125 ರೂ. ಮೌಲ್ಯದ ಬೆಳ್ಳಿ ನಾಣ್ಯಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, “”ಇಂದು ನಾವು ಶ್ರೀಮದ್‌ ಪ್ರಭುಪಾದರ 125ನೇ ಜನ್ಮ ದಿನೋತ್ಸವವನ್ನು ಆಚರಿಸುತ್ತಿದ್ದೇವೆ. ಇದು ಧ್ಯಾನ, ಭಕ್ತಿ ಮತ್ತು ನೆಮ್ಮದಿಯ ಸಮ್ಮಿಲನದಿಂದ ಆಗು ವಂಥ ಸಂತೋಷವನ್ನು ನೀಡುವಂಥ ಸುದಿನ ವಾಗಿದೆ. ವಿಶ್ವದೆಲ್ಲೆಡೆ ಹರಡಿರುವ ಶ್ರೀ ಪ್ರಭುಪಾದರ ಕೋಟ್ಯಂತರ ಅನುಯಾಯಿಗಳು ಈ ಸಂತೋಷವನ್ನು ಇಂದು ಅನುಭವಿಸುತ್ತಿದ್ದಾರೆ” ಎಂದು ತಿಳಿಸಿದರು.

ಇದೇ ವೇಳೆ, ಭಾರತೀಯ ಸಮಾಜಕ್ಕಾಗಿ ಇಸ್ಕಾನ್‌ ಸಂಸ್ಥೆ ನೀಡಿದ ಸೇವೆಯನ್ನು ಸ್ಮರಿಸಿದ ಅವರು, “”2001ರಲ್ಲಿ ಕಛ್ ನಲ್ಲಿ ಭೂಕಂಪವಾದಾಗ, ಉತ್ತರಾಖಾಂಡ, ಒಡಿಶಾ, ಪಶ್ಚಿಮ ಬಂಗಾಳಗಳಲ್ಲಿ ನೈಸರ್ಗಿಕ ವಿಕೋಪಗಳಾದಾಗ ಅಲ್ಲೆಲ್ಲಾ ಇಸ್ಕಾನ್‌ ನೀಡಿದ ಸೇವೆಯನ್ನು ಎಂದಿಗೂ ಮರೆಯುವಂತಿಲ್ಲ” ಎಂದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಕಿಶನ್‌ ರೆಡ್ಡಿ ಕೂಡ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next