ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು “ಸಾಮಾನ್ಯ ವ್ಯಕ್ತಿಯಲ್ಲ”…ಆದರೆ ಅವರೊಬ್ಬ ಸರ್ವಶಕ್ತನ ಅವತಾರ ಎಂದು ಉತ್ತರಪ್ರದೇಶದ ಪಂಚಾಯತ್ ರಾಜ್ ಸಚಿವ ಉಪೇಂದ್ರ ತಿವಾರಿ ಪ್ರಧಾನಿ ಮೋದಿ ಅವರನ್ನು ಈ ರೀತಿ ಹೊಗಳಿರುವುದಾಗಿ ಎಎನ್ ಐ ವರದಿ ಮಾಡಿದೆ.
ಇದನ್ನೂ ಓದಿ:ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ
ಹರ್ದೋಯಿಯಲ್ಲಿ ಅಮೃತ್ ಮಹೋತ್ಸವದ ಅಂಗವಾಗಿ ಸ್ವಚ್ಛ ಭಾರತ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ವೇಳೆ ತಿವಾರಿ ಈ ಹೇಳಿಕೆ ನೀಡಿದ್ದಾರೆ. ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ತಿವಾರಿ, 2019ರಲ್ಲಿ ಮೈತ್ರಿ ಮಾಡಿಕೊಂಡರು, ಒಬ್ಬರನ್ನೊಬ್ಬರು ನೋಡಲು ಇಷ್ಟ ಪಡದ ಬುವಾ(ಚಿಕ್ಕಮ್ಮ) ಮತ್ತು ಭಟಿಜಾ(ಸೋದರಳಿಯ) ಸೇರಿ ಮೈತ್ರಿಕೂಟ ರಚಿಸಿದ್ದರು. ಇಂತಹ 24 ಪಕ್ಷಗಳು ಸೇರಿ ಮಹಾಘಟಬಂಧನ್
ರಚಿಸಿಕೊಂಡಿವೆ, ಅವುಗಳ ಉದ್ದೇಶ ಒಂದೇ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವುದಾಗಿದೆ ಎಂದು ಆರೋಪಿಸಿದರು.
ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮುಖಂಡರು ದೇಶಾದ್ಯಂತ ಇರುವ ದೇವಸ್ಥಾನಗಳಿಗೆ ಭೇಟಿ ನೀಡಲು ಆರಂಭಿಸುತ್ತಾರೆ ಎಂದು ತಿವಾರಿ ಹೇಳಿದರು.
ಕೇಜ್ರಿವಾಲ್ ಮಾತ್ರವಲ್ಲ, ಈಗ ಉತ್ತರಪ್ರದೇಶದ ಎಲ್ಲಾ ರಾಜಕೀಯ ಮುಖಂಡರು ದೇವಸ್ಥಾನಗಳಿಗೆ ಭೇಟಿ ಕೊಡಲು ಆರಂಭಿಸುತ್ತಾರೆ. ಯಾಕೆಂದರೆ 2022ರಲ್ಲಿ ವಿಧಾನಸಭೆ ಚುನಾವಣೆ ಬರಲಿದೆ ಎಂದು ತಿವಾರಿ ವ್ಯಂಗ್ಯವಾಡಿದರು.