Advertisement

ಯುನೆಸ್ಕೊ ಸೃಜನಾತ್ಮಕ ನಗರಗಳಲ್ಲಿ ಚೆನ್ನೈಗೆ ಸ್ಥಾನ

07:25 AM Nov 09, 2017 | |

ಚೆನ್ನೈ: ಯುನೆಸ್ಕೊ ಸೃಜನಾತ್ಮಕ ನಗರಗಳ ಪಟ್ಟಿಯಲ್ಲಿ ತಮಿಳುನಾಡು ರಾಜಧಾನಿ ಚೆನ್ನೈ ಸ್ಥಾನ ಪಡೆದಿದೆ. ಜಾಗತಿಕ ಮಟ್ಟದಲ್ಲಿ ಸಂಗೀತ ಕ್ಷೇತ್ರದಲ್ಲಿ ಮಹತ್ತರ ಕೊಡುಗೆಗಳನ್ನು ನೀಡುತ್ತಿರುವ ಕಾರಣ ಚೆನ್ನೈ ಈ ಅರ್ಹತೆ ಪಡೆದಿದೆ ಎಂದು ಯುನೆಸ್ಕೊ ಹೇಳಿದೆ.

Advertisement

ಈ ವಾರಾರಂಭದಲ್ಲಿ ಯುನೆಸ್ಕೊ 44 ದೇಶಗಳ 64 ನಗರಗಳನ್ನು ಸೃಜನಾತ್ಮಕ ನಗರ ಪಟ್ಟಿಗಾಗಿ ಆಯ್ಕೆ ಮಾಡಿತ್ತು. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ನಗರಗಳ ಪೈಕಿ ಚೆನ್ನೈ 3ನೇ ನಗರ. ಇದಕ್ಕೂ ಮೊದಲು ಜೈಪುರ ಮತ್ತು ವಾರಾಣಸಿ ನಗರಗಳು ಸ್ಥಾನ ಪಡೆದಿದ್ದವು.

ನಾವೀನ್ಯತೆ ಮತ್ತು ಸೃಜನಾತ್ಮಕತೆಗಳನ್ನು ಒಳಗೊಂಡ ಸುಸ್ಥಿರ ನಗರಾಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಯುನೆಸ್ಕೊ ಈ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಜಾಗತಿಕ ಮಟ್ಟದಲ್ಲಿ ಸೃಜನಾತ್ಮಕ ನಗರಗಳ ಜಾಲವನ್ನು ತಯಾರು ಮಾಡುತ್ತಿದೆ. ಈ ಯೋಜನೆಗೆ ಸ್ಥಳೀಯ ಆಡಳಿತದ ಸಹಕಾರ ದೊರಕಲಿದೆ ಎಂದು ಯುನೆಸ್ಕೊ ಹೇಳಿದೆ. ಸೃಜನಾತ್ಮಕ ನಗರ ಪಟ್ಟಿಗೆ ಚೆನ್ನೈ ಸೇರಿರುವುದಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅಭಿನಂದನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next