ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬೌದ್ಧ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ನಿಟ್ಟಿನಲ್ಲಿ ಬುಧವಾರ(ಅಕ್ಟೋಬರ್ 20) ಉತ್ತರಪ್ರದೇಶದ ಕುಶಿನಗರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.
ಇದನ್ನೂ ಓದಿ:ಕಾಶ್ಮೀರದಲ್ಲಿ ಯೋಧರ ಹತ್ಯೆ;ಪಾಕ್ ಜತೆ ಟಿ-20 ಕ್ರಿಕೆಟ್ ಪಂದ್ಯವಾಡ್ತೀರಾ? ಕೇಂದ್ರಕ್ಕೆ ಒವೈಸಿ
ಗೌತಮ್ ಬುದ್ಧ ಪರಿನಿರ್ವಾಣ ಹೊಂದಿದ ಪುರಾತನ ನಗರವಾದ ಕುಶಿನಗರದಲ್ಲಿ ಪ್ರಧಾನಿ ಮೋದಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದ್ದು, ಇದು ಪೂರ್ವಾಂಚಲ್ ಜನರಿಗೆ ನೀಡಿರುವ ಭರವಸೆಯ ಈಡೇರಿಕೆಯಾಗಿದೆ ಎಂದು ಮೋದಿ ಹೇಳಿದರು. ಇದು ಉತ್ತರಪ್ರದೇಶದ ಮೂರನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
260 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸುಂದರ ನಿಲ್ದಾಣದ ಮೂಲಕ ದೇಶೀಯ ವಿಮಾನಗಳೂ ಕಾರ್ಯಾಚರಿಸಲಿದ್ದು. ಬುಧವಾರ ಬೆಳಗ್ಗೆ 10ಕ್ಕೆ ಶ್ರೀಲಂಕಾದ ಕೊಲಂಬೊದಿಂದ ಕುಶಿನಗರಕ್ಕೆ ವಿಮಾನವೊಂದು ಅನಂತರ ಉದ್ಘಾಟನೆ ನೆರವೇರಿತ್ತು.
ಬೌದ್ಧ ಭಿಕ್ಷುಗಳು ಮೂರು ತಿಂಗಳು ನಿರಂತರ ಧ್ಯಾನ, ಇತರೆ ಆಧ್ಯಾತ್ಮಿಕ ಚಟುವಟಿಕೆಗಳನ್ನು ಮುಗಿಸುವ ದಿನಕ್ಕೆ ಅಭಿಧಮ್ಮ ಎನ್ನುತ್ತಾರೆ. ಈ ಕಾರ್ಯಕ್ರಮದಲ್ಲಿ ಬೋಧಿ ವೃಕ್ಷ ನೆಟ್ಟು ನಂತರ ಬೌದ್ಧ ಸೂತ್ರಗಳ ತಾಳೆಗರಿ ಗ್ರಂಥಗಳು, ಅಜಂತಾ ಗುಹೆಗಳಲ್ಲಿ ರಚಿತವಾಗಿರುವ ಚಿತ್ರಗಳ ಪ್ರದರ್ಶನವನ್ನು ಮೋದಿ ವೀಕ್ಷಿಸಿದರು.