Advertisement

21ನೇ ಶತಮಾನ ಭಾರತೀಯರದ್ದು: ಪ್ರವಾಸಿ ಭಾರತೀಯ ದಿವಸದಲ್ಲಿ ಪ್ರಧಾನಿ 

02:42 PM Jan 08, 2017 | |

ಬೆಂಗಳೂರು:  ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಪ್ರಾರಂಭಗೊಂಡ ಮೂರು ದಿನಗಳ ಪ್ರವಾಸಿ ಭಾರತೀಯ ದಿವಸ ಸಮಾವೇಶದ 2 ನೇ ದಿನವಾದ ಭಾನುವಾರ ಅನಿವಾಸಿ ಭಾರತೀಯರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ  ಭಾಷಣ ಮಾಡಿದರು. 

Advertisement

21 ನೇ ಶತಮಾನ ಎನ್ನುವುದು ಭಾರತೀಯರದ್ದು ಎಂದು ನಾನು ಸಂಪೂರ್ಣ ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ. ಭಾರತದ ಅಭಿವೃದ್ಧಿಯಲ್ಲಿ ಅನಿವಾಸಿ ಭಾರತೀಯ ಸಮುದಾಯದ ಕೊಡುಗೆ ಅಪಾರವಾಗಿದೆ. ನೀವೆಲ್ಲ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟವಾಗಿ ಸರಕಾರ ಕೈಗೊಂಡ ನೋಟು  ನಿಷೇಧ ಕ್ರಮವನ್ನು ಬೆಂಬಲಿಸಿದ್ದೀರಿ ಇದಕ್ಕಾಗಿ ನನ್ನ ಧನ್ಯವಾದಗಳು ಎಂದರು.

30 ಮಿಲಿಯನ್  ಭಾರತೀಯರು ವಿದೇಶಲ್ಲಿ ನೆಲೆಸಿದ್ದು, ಭಾರತದ ಅಭಿವೃದ್ಧಿಗೆ ಪ್ರವಾಸಿಗರ ಕೊಡುಗೆ ಅಪಾರವಾದದ್ದು. ಅನಿವಾಸಿಗಳು ಭಾರತದ ಸಂಸ್ಕೃತಿ ಮೌಲ್ಯಗಳನ್ನು ಉಳಿಸಿ ಬೆಳೆಸುತ್ತಿದ್ದಾರೆ.ನೆಲೆಸಿರುವ ದೇಶ ಅವರಿಗೆ ಕರ್ಮಭೂಮಿಯಾಗಿದ್ದು ಭಾರತ ಧರ್ಮ ಭೂಮಿಯಾಗಿದೆ ಎಂದರು. 

ನಾವು ಪಾಸ್‍ಪೋರ್ಟ್‌ನ ಬಣ್ಣ ನೋಡಿ ಯಾವುದನ್ನೂ ಪರಿಗಣಿಸುವುದಿಲ್ಲ. ದೇಶಗಳ ನಡುವಿನ ರಕ್ತ ಸಂಬಂಧವನ್ನು ಪರಿಗಣಿಸುತ್ತೇವೆ. ಉದ್ಯೋಗಾಕಾಂಕ್ಷಿಗಳಾಗಿ ವಿದೇಶಕ್ಕೆ ತೆರಳುವವರ ರಕ್ಷಣೆಗೆ ಸರಕಾರ ಬದ್ದವಾಗಿದೆ. ಸುಷ್ಮಾ ಸ್ವರಾಜ್ ಅವರು ವಿದೇಶದಲ್ಲಿರುವ ಭಾರತೀಯರ ರಕ್ಷಣೆ ಕುರಿತಂತೆ ತ್ವರಿತವಾಗಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ ಸಂಕಷ್ಟಕ್ಕೆ ಸಿಲುಕಿದ್ದ  80 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು. 

ವಿದೇಶದಲ್ಲಿ ಉದ್ಯೋಗ ಹುಡುಕುವ ಯುವಕರಿಗಾಗಿ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಯಕ್ರಮ, ‘ಪ್ರವಾಸಿ ಕುಶಲ್ ವಿಕಾಸ್’ ಯೋಜನೆಯನ್ನು ಶೀಘ್ರದಲ್ಲೇ ಅನಾವರಣಗೊಳಿಸುತ್ತಿದ್ದೇವೆ ಎಂದರು. 

Advertisement

ಪ್ರವಾಸಿ ಭಾರತೀಯರಿಗಾಗಿ ಪಿಐಒ ಕಾರ್ಡ್ ಗಳನ್ನು ಒಸಿಐ ಕಾರ್ಡ್ ಗಳನ್ನಾಗಿ ಬದಲಿಸಿಕೊಳ್ಳಲು ನೀಡಲಾಗಿದ್ದ ಕೊನೆಯ ದಿನಾಂಕವನ್ನು ಈ ವರ್ಷದ ಜೂನ್ ತಿಂಗಳವರೆಗೂ ವಿಸ್ತರಿಸಿದ್ದೇವೆ. ನಿಮ್ಮಲ್ಲಿನ ಯುವಜನರು ಭಾರತವನ್ನು ಎಂದಿಗೂ ಮರೆಯಬಾರದು. ಮತ್ತೆ ಮತ್ತೆ ಭಾರತಕ್ಕೆ ಬರುತ್ತಲೆ ಇರಬೇಕು ಎಂದು ಕರೆ ನೀಡಿದರು. 

ನಾನು ಗುಜರಾತ್‍ ಮುಖ್ಯಮಂತ್ರಿಯಾಗಿದ್ದ ವೇಳೆ  ಪ್ರತಿಭಾವಂತರ ವಿದೇಶಕ್ಕೆ ಪಲಾಯನ ಮಾಡುತ್ತಿರುವ ಕುರಿತು ‘ಬ್ರೇನ್ ಡ್ರೈನ್’ ಎಂದಿದ್ದೆ. ಭಾರತದಲ್ಲಿರುವವರೆಲ್ಲಾ ದಡ್ಡರು ಅಂತ ಅರ್ಥವೇ ಎಂದಿದ್ದೆ. ಇಂದು ಪರಿಸ್ಥಿತಿ ಬದಲಾಗಿದ್ದು ವಿದೇಶಕ್ಕೆ ಹೋಗಿದ್ದ ಪ್ರತಿಭಾವಂತರು ಸ್ವದೇಶಕ್ಕೆ  ವಾಪಾಸಾಗುತ್ತಿದ್ದಾರೆ.ಬ್ರೇನ್‌ ಡ್ರೈನ್‌ ಎನ್ನುವುದು ‘ಬ್ರೇನ್‌ ಗ್ರೇನ್‌’ ಆಗಿ ಪರಿವರ್ತನೆಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next