ರಾಯಬರೇಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷೇತ್ರ ರಾಯ್‌ಬರೇಲಿಯಲ್ಲಿ 1,100 ಕೋಟಿ ರೂಪಾಯಿಯ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
ರಾಯ್ ಬರೇಲಿಯಲ್ಲಿ ಸಾರ್ವಜನಿಕ ಸಭೆ ನಡೆಸುವುದರ ಜೊತೆಗೆ,900 ನೇ ಕೋಚ್ ಪ್ಯಾಕ್ಟರಿ ಮತ್ತು ಹಮ್ ಸಫರ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು.
ಕೋಚ್ ಫ್ಯಾಕ್ಟರಿ ಇಲ್ಲಿನ ಇಂಜಿನಿಯರ್ ಮತ್ತು ಯುವಕರಿಗೆ ಉದ್ಯೋಗ ಕಲ್ಪಿಸಿಕೊಡಲಿದೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ಧಾಳಿ
ಹಿಂದಿನ ಸರ್ಕಾರ ಫ್ಯಾಕ್ಟರಿಯಲ್ಲಿ 5 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಲು ಮುಂದಾಗಿತ್ತು, ಆದರೆ ಅರ್ಧದಷ್ಟು ಮಂದಿಗೆ ಮಾತ್ರ ಉದ್ಯೋಗ ಕಲ್ಪಿಸಿತ್ತು.2014 ರಲ್ಲಿ ಹೊಸ ನೇಮಕಾತಿ ಮಾಡದೆ ಇರುವುದು ನಮ್ಮ ಗಮನಕ್ಕೆ ಬಂದಿತ್ತು ಎಂದು ಪ್ರಧಾನಿ ವಾಗ್ಧಾಳಿ ನಡೆಸಿದರು.
ಹೆಲಿಕ್ಯಾಪ್ಟರ್ ಹಗರಣದ ಆರೋಪಿ ಕ್ರಿಸ್ಟಿಯನ್ ಮೈಕಲ್‌ನನ್ನು ಭಾರತಕ್ಕೆ ಎಳೆದು ತಂದಾಗ ಕಾಂಗ್ರೆಸ್ ಹೇಗೆ ತನ್ನ ವಕೀಲರನ್ನು ರಕ್ಷಣೆಗೆ ಕಳುಹಿಸಿತು ಎನ್ನುವುದು ಗೊತ್ತಿದೆಯಲ್ಲ ಎಂದು ಪ್ರಧಾನಿ ಪ್ರಶ್ನಿಸಿದರು.
ಯಾವ ಪಕ್ಷದವರು ಸರ್ಜಿಕಲ್ ದಾಳಿಯ ಬಗ್ಗೆ ಪ್ರಶ್ನೆ ಮಾಡುತ್ತಾರೆಯೋ , ಅವರು ನಮ್ಮ ಸೈನಿಕರಿಂತ ಹೆಚ್ಚಾಗಿ ವೈರಿಗಳು ಮಾಡಿದ ಆರೋಪವನ್ನು ನಂಬುತ್ತಾರೆ ಎಂದರು.