Advertisement

ತಾಯಿಯ ಆಶೀರ್ವಾದ ಪಡೆದು ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ

08:36 AM Apr 24, 2019 | Team Udayavani |

ಅಹಮದಾಬಾದ್‌ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಮತದಾನ ಮಾಡುವ ಮುನ್ನ ತಾಯಿ ಹೀರಾಬೆನ್‌ ಅವರ ಆಶೀರ್ವಾದ ಪಡೆದರು.

Advertisement

ವ್ಯಾಪಕ ಭದ್ರತೆಯೊಂದಿಗೆ ರಾನಿಪ್‌ನ ಮತಗಟ್ಟೆಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ನೋಡಲು ಸಾವಿರಾರು ಜನರ ಜಮಾವಣೆಗೊಂಡಿದ್ದರು. ವ್ಯಾಪಕ ಭದ್ರತೆ ಕೈಗೊಳ್ಳಲಾಗಿದ್ದು, ಸ್ವಮಲ್ಪ ದೂರ ತೆರದ ವಾಹನದಲ್ಲಿ ಆಗಮಿಸಿ ಹಕ್ಕು ಚಲಾವಣೆ ಮಾಡಿದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಮತಗಟ್ಟೆಯ ಬಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು. ಈ ವೇಳೆ ಅಮಿತ್‌ ಶಾ ಅವರ ಮೊಮ್ಮಗಳನ್ನು ಪ್ರಧಾನಿ ನರೇಂದ್ರ ಮೋದಿ ಮುದ್ದಾಡಿದರು.

ಸಾವಿರಾರು ಅಭಿಮಾನಿಗಳಿಂದ ಮೋದಿ…ಮೋದಿ ಎಂಬ ಜೈಕಾರ ಮೊಳಗಿತು.

ಕುಂಭ ಮೇಳದಲ್ಲಿ ಸ್ನಾನ ಮಾಡಿ ಪವಿತ್ರವಾಗುವ ಅನುಭವದಂತೆ , ಲೋಕತಂತ್ರದ ಪವಿತ್ರ ಕಾರ್ಯ ಮತದಾನ ಮಾಡಿದ ಬಳಿಕ ಆಗಿದೆ ಎಂದು ಪ್ರಧಾನಿ ಹೇಳಿದರು.

Advertisement

ಲೋಕತಂತ್ರದ ಮಹಾನ್‌ ಉತ್ಸವದಲ್ಲಿ ನನಗೆ ಭಾಗಿಯಾಗಲು ಅವಕಾಶ ದೊರಕಿದೆ. ಎಲ್ಲಾ ಮತದಾರರು ವಿವೇಕ ಹೊಂದಿದವರು. ಹಾಲನ್ನು ಹಾಲಾಗಿ, ನೀರನ್ನು ನೀರಾಗಿ ನೋಡುವ ವಿವೇಚನೆ ಉಳ್ಳವರು ಎಂದರು.

ಮೊದಲ ಬಾರಿ ಮತದಾನ ಮಾಡುವ ಯುವ ಮತದಾರರಿಗೆ ನಾನು ಸ್ವಾಗತಿಸುತ್ತೇನೆ ಮತ್ತು ಶುಭಕಾಮನೆಗಳನ್ನು ಸಲ್ಲಿಸುತ್ತೇನೆ. ಮೊದಲ ಬಾರಿ ಮತದಾನ ಮಾಡುವವರು ದೇಶದ ಭವಿಷ್ಯವನ್ನು ಉಜ್ವಲ ಮಾಡಲು ಮತದಾನ ಮಾಡಬೇಕಾಗಿದೆ ಎಂದರು.

ಉಗ್ರರ ಶಸ್ತ್ರ ಐಇಡಿ , ಪ್ರಜಾಪ್ರಭುತ್ವದ ಶಸ್ತ್ರ ವೋಟರ್‌ ಐಡಿ. ವೋಟರ್‌ ಐಡಿ ಎನ್ನುವುದು ಐಇಡಿಗಿಂತಲೂ ಶಕ್ತಿ ಶಾಲಿ ಎಂದು ಪ್ರಧಾನಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next