Advertisement

ಪ್ರಧಾನಿ ಮೋದಿಗೆ UAE ಅತ್ಯುನ್ನತ ನಾಗರಿಕ ಪ್ರಶಸ್ತಿ ಝಾಯೆದ್ ಮೆಡಲ್ ಗೌರವ

09:19 AM Apr 05, 2019 | Team Udayavani |

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಯುಕ್ತ ಅರಬ್ ಸಂಸ್ಥಾನದ(ಯುಎಇ) ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಝಾಯೆದ್ ಮೆಡಲ್ ನೀಡಿ ಗೌರವಿಸಿದೆ. ಉಭಯ ದೇಶಗಳ ನಡುವಿನ ಸ್ನೇಹ, ಸೌಹಾರ್ದಕ್ಕಾಗಿ ಪ್ರಧಾನಿ ಮೋದಿ ನಿರ್ವಹಿಸಿರುವ ಪಾತ್ರದ ಹಿನ್ನೆಲೆಯಲ್ಲಿ ಈ ಗೌರವ ನೀಡಲಾಗಿದೆ ಎಂದು ಯುಎಇ ಹೇಳಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿ ನೀಡಿರುವುದನ್ನು ಪ್ರಿನ್ಸ್ ಶೇಕ್ ಮೊಹಮ್ಮದ್ ಬಿನ್ ಝಾಯೆದ್ ಖಚಿತಪಡಿಸಿದ್ದಾರೆ. ನಾವು ಭಾರತದ ಜೊತೆ ಐತಿಹಾಸಿಕ ಮತ್ತು ಸೌಹಾರ್ದತೆಯ ಸಂಬಂಧವನ್ನು ಹೊಂದಿದ್ದೇವೆ. ನಮ್ಮ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ನಮ್ಮ ಬಾಂಧವ್ಯ ಮತ್ತಷ್ಟು ವೃದ್ಧಿಸುವಂತಾಯ್ತು..ಈ ನಿಟ್ಟಿನಲ್ಲಿ ಯುಎಇ ಅಧ್ಯಕ್ಷರು ಝಾಯೆದ್ ಮೆಡಲ್ ಅನ್ನು ನೀಡಿ ಗೌರವಿಸಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈ ಮೊದಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್, ಗ್ರೇಟ್ ಬ್ರಿಟನ್ ರಾಣಿ ಎಲಿಜಬೆತ್ 2 ಹಾಗೂ ಪಾಕಿಸ್ತಾನ ಮಾಜಿ ಅಧ್ಯಕ್ಷ ಜನರಲ್ ಪರ್ವೆಜ್ ಮುಶರ್ರಫ್ ಗೂ ಯುಎಇ ಝಾಯೆದ್ ಮೆಡಲ್ ಅನ್ನು ನೀಡಿ ಗೌರವಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ 2016ರಲ್ಲಿ ಅಬ್ದುಲ್ ಅಜೀಜ್ ಅಲ್ ಸೌದ್ ಪ್ರಶಸ್ತಿ, ಅಫ್ಘಾನಿಸ್ತಾನದ ಘಾಜಿ ಅಮೀರ್ ಅಮಾನುಲ್ಲಾ ಖಾನ್ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next