ನವದೆಹೆಲಿ: ಜನವರಿ 3 ರಿಂದ 15-18 ವರ್ಷದ ಮಕ್ಕಳಿಗೆ ಲಸಿಕೆ ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶವನ್ನು ಉದ್ದೇಶಿಸಿ ಮಾತಾನಾಡಿದ ಅವರು, ಕೋವಿಡ್ ನಮ್ಮಿಂದ ದೂರವಾಗಿಲ್ಲ, ಓಮಿಕ್ರಾನ್ ಕೂಡ ಹೆಚ್ಚಾಗುತ್ತ ಇದೆ.ಪ್ರತಿಯೊಬ್ಬರು ಮಾಸ್ಕ್ ಹಾಗೂ ಕೋವಿಡ್ ನಿಯಮವನ್ನು ಪಾಲಿಸಬೇಕು. ರೋಗದ ವಿರುದ್ಧ ಗಾಬರಿಪಡುವ ಅಗತ್ಯವಿಲ್ಲ. ಒಂದಾಗಿ ಹೋರಾಡಬೇಕಿದೆ ಎಂದು ಹೇಳಿದರು.
ಜ.3 ರಿಂದ 15-18 ವರ್ಷದ ಮಕ್ಕಳಿಗೆ ಶಾಲಾ – ಕಾಲೇಜಿಗೆ ತೆರಳಿ ಲಸಿಕೆಯನ್ನು ನೀಡಲಾಗುವುದು, ವೈದ್ಯರ ಸಲಹೆ ಮೇರೆಗೆ ಪ್ರಿಕಾಷನ್ ಡೋಸ್ ನೀಡಲಾಗುವುದು ಎಂದು ಹೇಳಿದ್ದಾರೆ. ಜನವರಿ 10 ರಿಂದ ಫ್ರಂಟ್ ಲೈನ್ ವರ್ಕಸ್ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲು ನಿರ್ಧರಿಸಲಾಗಿದೆ. ಎಂದು ಈ ವೇಳೆ ಹೇಳಿದರು.
ಡಿಎನ್ ಎ ಆಧರಿತ ಲಸಿಕೆ ಹಾಗೂ ಮೂಗಿನ ಮೂಲಕ ನೀಡುವ ವ್ಯಾಕ್ಸಿನ್ ಸಿದ್ಧವಾಗಿದೆ ಅದನ್ನು ಶೀಘ್ರದಲ್ಲಿ ನೀಡುತ್ತೇವೆ ಎಂದರು.