Advertisement

ಪ್ರಧಾನಿ ಮೋದಿ ಅವರದ್ದು ಚರಂಡಿ ರಾಜಕಾರಣ: ಅಹ್ಮದ್‌ ಪಟೇಲ್‌ ಕಿಡಿ

08:41 AM Apr 06, 2019 | Sathish malya |

ಹೊಸದಿಲ್ಲಿ : ಪ್ರಧಾನಿ ಮೋದಿ ಅವರದ್ದು ಚರಂಡಿ ಮಟ್ಟದ ರಾಜಕೀಯ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಅಹ್ಮದ್‌ ಪಟೇಲ್‌ ಜರೆದಿದ್ದಾರೆ.

Advertisement

ಆಗಸ್ಟಾ ವೆಸ್ಟ್‌ ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಹಗರಣದಲ್ಲಿ ಅಹ್ಮದ್‌ ಪಟೇಲ್‌ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮೋದಿ ಮಾಡಿದ್ದ ಆರೋಪಗಳ ಸರಣಿಯಿಂದ ಕಂಗೆಟ್ಟಿರುವ ಅಹ್ಮದ್‌ ಪಟೇಲ್‌ ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನವಾಗಿ, “ಪ್ರಧಾನಿ ಮೋದಿ ಅವರದ್ದು ಅತ್ಯಂತ ಕೀಳು ರೀತಿಯ, ಚರಂಡಿ ಮಟ್ಟದ ರಾಜಕಾರಣ’ ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಅವರು ಡೆಹರಾಡೂನ್‌ನಲ್ಲಿಂದು ಚುನಾವಣಾ ಪ್ರಚಾರ ರಾಲಿಯಲ್ಲಿ ಮಾತನಾಡುತ್ತಾ “ನಾನು ಮಾಧ್ಯಮದಲ್ಲಿ ಕಂಡ ಪ್ರಕಾರ ಆಗಸ್ಟಾ ವೆಸ್ಟ್‌ ಲ್ಯಾಂಡ್‌ ಪ್ರಕರಣದಲ್ಲಿ ಲಂಚ ಕೇಳಿದ ವ್ಯಕ್ತಿ AP ಮತ್ತು FAM ಎಂದು ಗೊತ್ತಾಗಿದೆ. ಹಗರಣದ ಚಾರ್ಜ್‌ ಶೀಟ್‌ನಲ್ಲಿ AP ಎಂದರೆ ಅಹ್ಮದ್‌ ಪಟೇಲ್‌ ಎಂದೂ FAM ಎಂದರೆ ಫ್ಯಾಮಿಲಿ ಎಂದೂ ಉಲ್ಲೇಖೀಸಲಾಗಿದೆ. ಯಾವ ಫ್ಯಾಮಿಲಿಗೆ ಅಹ್ಮದ್‌ ಪಟೇಲ್‌ ನಿಕಟರಾಗಿದ್ದಾರೆ ಎಂದು ಈಗ ನೀವೇ ಹೇಳಿ’ ಎಂಬುದಾಗಿ ನೆರೆದ ಜನಸಮೂಹವನ್ನು ಪ್ರಶ್ನಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next