Advertisement
-ತಮ್ಮ ಸರಕಾರದ ಸಾಧನೆಯ ಬಗ್ಗೆ ಪ್ರಧಾನಿ ಮೋದಿ ಟ್ವಿಟರ್ ಮತ್ತು ವೆಬ್‌ಸೈಟ್‌ನಲ್ಲಿ ಬರೆದು ಕೊಂಡದ್ದು ಹೀಗೆ. ಸರಕಾರ ವರ್ಷ ಪೂರೈಸಿರುವ ಸಂದರ್ಭ ದೇಶವಾಸಿಗಳಿಗೆ ಪತ್ರ ಬರೆದು ವರ್ಷದ ಸಾಧನೆ ಬಗ್ಗೆ ಪ್ರಧಾನಿ ಹೆಮ್ಮೆಯಿಂದ ಹೇಳಿ ಕೊಂಡಿದ್ದಾರೆ. ಜತೆಗೆ ಟ್ವಿಟರ್, ವೆಬ್ ಸೈಟ್‌ನಲ್ಲಿ ಸಾಧನೆಯ ಅನಾವರಣ ಮಾಡಿದ್ದಾರೆ.
“ಜಮ್ಮು – ಕಾಶ್ಮೀರ,ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಉದಯ, ಐತಿಹಾಸಿಕ ಕಾರ್ಪೊರೇಟ್ ತೆರಿಗೆ ಕಡಿತ, ವ್ಯಾಪಾರಿಗಳಿಗೆ ಪಿಂಚಣಿ, ಬಗೆಹರಿದ ಅಯೋಧ್ಯೆ ವಿವಾದ ಪ್ರಮುಖ ಹೆಜ್ಜೆಗಳು’ಎಂದು ಉಲ್ಲೇಖೀಸಲಾಗಿದೆ.
Related Articles
ಕೋವಿಡ್-19 ಬಿಕ್ಕಟ್ಟನ್ನು ಮೋದಿ ಸರಕಾರ ಯಶಸ್ವಿಯಾಗಿ ನಿಭಾಯಿಸಿದ ಅಂಶಗಳನ್ನೂ ಪ್ರಸ್ತಾವಿಸಲಾಗಿದೆ. ದೇಶಕ್ಕೆ ವೈರಸ್ ದಾಳಿ ಮಾಡಿದ ಆರಂಭದಲ್ಲಿ ತೆಗೆದುಕೊಂಡ ಮುಂಜಾಗ್ರತೆಗಳು, ಕಟ್ಟುನಿಟ್ಟಿನ ಲಾಕ್‌ಡೌನ್, ವೈದ್ಯಕೀಯ ಸೌಲಭ್ಯ ಹೆಚ್ಚಿಸಿರುವುದು, ಜಗತ್ತಿನಲ್ಲೇ ಅತಿಹೆಚ್ಚು ಪಿಪಿಇ ಕಿಟ್ ಉತ್ಪಾದನೆ, ಬಡವರ ಪರವಾಗಿ ತೆಗೆದುಕೊಂಡ ಮಹತ್ವದ ಯೋಜನೆಗಳು ಮೋದಿ ಸರಕಾರ ಕೋವಿಡ್-19 ಯುದ್ಧದಲ್ಲಿ ಗೆಲ್ಲುವಂತೆ ಮಾಡಿದವು ಎಂಬ ವಿವರಗಳಿವೆ.
Advertisement
ವಿದೇಶಾಂಗ ನೀತಿಯೇ ಆಗಲಿ, ರಾಷ್ಟ್ರೀಯ ಭದ್ರತೆ ವಿಚಾರವೇ ಆಗಲಿ, ಭಾರತ ಯಾವಾಗಲೂ ಪ್ರಥಮ ಸ್ಥಾನದಲ್ಲಿರಬೇಕೆಂದು ಮೋದಿ ಬಯಸುತ್ತಾರೆ. ಈ ಒಂದು ವರ್ಷದಲ್ಲಿ ಕೇಂದ್ರ ಸರಕಾರ ತೆಗೆದುಕೊಂಡ ದಿಟ್ಟ ಮತ್ತು ಐತಿಹಾಸಿಕ ನಿರ್ಧಾರಗಳಿಂದ ದೇಶ ವೇಗವಾಗಿ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂಬುದನ್ನು “ವಿಕಾಸ ಪತ್ರ’ ಹೇಳಿದೆ.
ದೇಶವಾಸಿಗಳಿಗೆ ಪ್ರಧಾನಿ ಪತ್ರ“ಕಳೆದ ವರ್ಷ ಈ ದಿನ, ಮೇ 30, 2019ರಂದು ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಆರಂಭವಾಯಿತು. ಸಾಮಾನ್ಯ ದಿನಗಳಾಗಿದ್ದರೆ ನಾನು ನಿಮ್ಮ ನಡುವೆ ಇದ್ದು, ವಾರ್ಷಿಕೋತ್ಸವವನ್ನು ಸಂಭ್ರಮಿಸುತ್ತಿದ್ದೆ. ಆದರೆ ಕೊರೊನಾದ ಸಂದಿಗ್ಧತೆ ಅವಕಾಶ ನೀಡುತ್ತಿಲ್ಲ. ಅದಕ್ಕಾಗಿ ಈ ಪತ್ರದ ಮೂಲಕ ನಿಮ್ಮ ಆಶೀರ್ವಾದ ಪಡೆಯುತ್ತಿದ್ದೇನೆ’ ಇದು ದೇಶವಾಸಿಗಳಿಗೆ ಪ್ರಧಾನಿ ಮೋದಿ ಬರೆದ ಪತ್ರದ ಆರಂಭಿಕ ಸಾಲುಗಳು. “ಕೋವಿಡ್-19 ದಾಳಿಗೈದಾಗ ಭಾರತ ನಲುಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ವಿಶ್ವಾಸ ಮತ್ತು ಸುಸ್ಥಿರತೆಯ ಮೂಲಕ ಜಗತ್ತು ನಮ್ಮನ್ನು ನೋಡುವ ವಿಧಾನವನ್ನು ನೀವು ಬದಲಾಯಿಸಿದ್ದೀರಿ. ವಿಶ್ವದ ಪ್ರಬಲ ಮತ್ತು ಸಮೃದ್ಧ ದೇಶಗಳೂ ಸರಿಗಟ್ಟಲಾಗದ ಸಾಮೂಹಿಕ ಶಕ್ತಿ ಪ್ರದರ್ಶನ ಮಾಡಿದ್ದೀರಿ. ಲಾಕ್‌ಡೌನ್ ಪಾಲನೆಯಲ್ಲಿ “ಏಕ ಭಾರತ, ಶ್ರೇಷ್ಠ ಭಾರತ’ ಕಲ್ಪನೆಯನ್ನು ಎತ್ತಿಹಿಡಿ ದಿದ್ದೀರಿ’ ಎಂದು ಮೋದಿ ಶ್ಲಾಘಿಸಿದ್ದಾರೆ. 60 ವರ್ಷಗಳ ಐತಿಹಾಸಿಕ ತಪ್ಪುಗಳಿಗೆ ಮುಕ್ತಿ
“ಆರು ದಶಕಗಳ ಐತಿಹಾಸಿಕ ತಪ್ಪುಗಳನ್ನು ಮೋದಿ ಸರಕಾರ ಕೇವಲ ಒಂದೇ ವರ್ಷದಲ್ಲಿ ಸರಿಪಡಿಸಿದೆ. ಮೋದಿ 2.0 ಸರಕಾರದ ಒಂದನೇ ವರ್ಷದ ಹಾದಿ ತುಂಬ ಐತಿ ಹಾಸಿಕ ಸಾಧನೆಗಳೇ ತುಂಬಿವೆ. ಪ್ರಧಾನಿ ಅವರು ಕಠಿನ, ದೊಡ್ಡ ನಿರ್ಧಾರಗಳಿಂದ ದೇಶದ ರೂಪುರೇಷೆ ಬದ ಲಿಸಿ ದ್ದಾರೆ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.”ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಪ್ರಧಾನಿ ಮೋದಿ ಅವರನ್ನು ಅಭಿನಂದಿಸುತ್ತೇನೆ. ಸ್ವಾವ ಲಂಬಿ ಭಾರತಕ್ಕೆ ಸರಕಾರವು ಭದ್ರ ಅಡಿಪಾಯ ಹಾಕಿದೆ’ ಎಂದು ಶಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ರಾಹುಲ್‌ಗೆ ನಡ್ಡಾ ತಿರುಗೇಟು
“ಈ ಒಂದು ವರ್ಷದಲ್ಲಿ ಮೋದಿ ಮುಂದೆ ಹಲವು ಸವಾಲುಗಳಿದ್ದವು. ಕಠಿನ, ದಿಟ್ಟ ನಿರ್ಧಾರಗಳ ಮೂಲಕ ಮೋದಿ ಅವುಗಳಿಗೆ ಉತ್ತರಿಸಿದ್ದಾರೆ. ರಾಹುಲ್ ಗಾಂಧಿಯವರ ತಿಳಿವಳಿಕೆ ಮತ್ತು ಅಧ್ಯಯನ ಬಹಳ ಸೀಮಿತ. ಅದಕ್ಕಾಗಿ ಲಾಕ್‌ಡೌನ್ ಅನ್ನು ಪ್ರಶ್ನಿಸು ವಾಗ ಅವರು ಗೊಂದಲಮಯ ಹೇಳಿಕೆ ನೀಡುತ್ತಿದ್ದಾರೆ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ.