Advertisement

ಸಾಮಾನ್ಯ ಮಳಿಗೆಯಲ್ಲಿ ಲಿಟ್ಟಿ-ಚೋಖಾ ಸವಿದ ಮೋದಿ!

08:40 AM Feb 20, 2020 | Sriram |

ನವದೆಹಲಿ: ತಮಗೆ ನೀಡಲಾಗಿರುವ ಬಿಗಿಭದ್ರತೆಯ ನಡುವೆಯೂ ಆಗಾಗ ಶಿಷ್ಟಾಚಾರಗಳನ್ನು ಬದಿಗೊತ್ತಿ, ಜನರತ್ತ ಧಾವಿಸಿ ಅವರ ಕೈ ಕುಲುಕುವ, ಮಕ್ಕಳನ್ನು ಮಾತನಾಡಿಸುವ ಪ್ರಧಾನಿ ನರೇಂದ್ರ ಮೋದಿ ಆಗಾಗ ರಾಜಕೀಯೇತರ ಕಾರಣಗಳಿಗೂ ಸುದ್ದಿಯಾಗುವುದುಂಟು. ಬುಧವಾರವೂ ಹಾಗೇ ಆಗಿದೆ.

Advertisement

ಬೆಳಗ್ಗೆ ಸಂಪುಟ ಸಭೆಯ ನಂತರ, ದೆಹಲಿಯ ರಾಜ್‌ಪಥ್‌ ಬಳಿ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಆಯೋಜಿಸಿರುವ “ಹುನಾರ್‌ ಹಾತ್‌’ ಎಂಬ ಕರಕುಶಲ ಮೇಳಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದ ಅವರು, ಮೇಳದಲ್ಲಿದ್ದ ಕುರುಕು ತಿಂಡಿಯ ಮಳಿಗೆಗೆ ತೆರಳಿ, ತಮಗಿಷ್ಟವಾದ ಉತ್ತರ ಪ್ರದೇಶದ ಖಾದ್ಯವಾದ “ಲಿಟ್ಟಿ-ಚೋಖಾ’ ಸವಿದು, ಮಣ್ಣಿನ ಕುಡಿಕೆಯಲ್ಲಿ ಚಹಾ ಕುಡಿದರು.

50 ನಿಮಿಷಗಳ ಕಾಲ ಅಲ್ಲಿಯೇ ಕಾಲ ಕಳೆದ ಅವರು, ಅಲ್ಲಿದ್ದ ಇತರ ಮಳಿಗೆಗಳ ಮಾಲೀಕರ ಜೊತೆಗೆ ಮಾತುಕತೆ ನಡೆಸಿದರಲ್ಲದೆ ಹಲವರ ಸೆಲ್ಫಿಗೆ ಮುಖವೊಡ್ಡಿದರು. ನಂತರ, ಅಂಗಡಿಯಾತನಿಗೆ ತಾವು ತಿಂದ ತಿಂಡಿಗೆ ಆಗಿದ್ದ 120 ರೂ. ಬಿಲ್‌ ಹಣ ಪಾವತಿಸಿ, ಆತನಿಗೊಂದು ಧನ್ಯವಾದ ಹೇಳಿ ಮುನ್ನಡೆದರು.

Advertisement

Udayavani is now on Telegram. Click here to join our channel and stay updated with the latest news.

Next