ಧಾರವಾಡ: ರಾಜ್ಯದ ಎರಡನೇ ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದರು.
ಸರಿಯಾಗಿ 10.45ಕ್ಕೆ ಒಟ್ಟು ದೇಶದ ಐದು ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಿಸಿದರು.
ಧಾರವಾಡ ರೈಲು ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಧಾರವಾಡ- ಬೆಂಗಳೂರು ವಂದೇ ಭಾರತ ರೈಲು ಸಮಯದಲ್ಲಿ ಒಂದಿಷ್ಟು ಪರಿವರ್ತನೆ ಮಾಡುವಂತೆ ಜನ ಕೇಳುತ್ತಿದ್ದಾರೆ. ಅದರೆ ಸದ್ಯಕ್ಕೆ ರೈಲಿನ ನಿರ್ವಹಣೆ ಬರೀ ಬೆಂಗಳೂರಿನಲ್ಲಿ ಮಾತ್ರ ಇದೆ. ಹೀಗಾಗಿ ಆರು ತಿಂಗಳ ನಂತರ ಮಾಡುತ್ತೇವೆ. ಐದು ಗಂಟೆಯಲ್ಲಿ ಬೆಂಗಳೂರು ತಲುಪುವಂತೆ ಮಾಡಬೇಕು. ಇದು ಸ್ವದೇಶಿ ನಿರ್ಮಿತ ರೈಲು ಎಂಬುದು ಹೆಮ್ಮೆ ಎಂದರು.
ನಮ್ಮ ದೇಶಿ ತಂತ್ರಜಾನ ಬಳಸಿ ಈ ರೈಲು ಅಭಿವೃದ್ದಿ ಪಡೆಸಿದ್ದು ಈವರೆಗೆ 23 ರೈಲುಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 400 ರೈಲು ಆರಂಭಗೊಳ್ಳಲಿವೆ. ಬೆಳಗಾವಿಯಿಂದ ಕೂಡ ಒಂದು ವಂದೇ ಭಾರತ ರೈಲು ಆರಂಭಿಸಲಾಗುವುದು ಎಂದರು.
ಇದನ್ನೂ ಓದಿ:Salman Khan ಹತ್ಯೆ ಖಚಿತ…: ಮತ್ತೆ ಎಚ್ಚರಿಸಿದ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರರ್
ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ಮಾತನಾಡಿ, ಭಾರತೀಯರ ರೈಲು ದೇಶ ಜೋಡಿಸುತ್ತದೆ. ಆರ್ಥಿಕ ಅಭಿವೃದ್ದಿಗೆ ಕೊಡುಗೆ ನೀಡುತ್ತಿದೆ. ಈ ನಿಟ್ಟಿನಲ್ಲಿ ವಂದೇ ಭಾರತ ಧಾರವಾಡದಿಂದ ಆರಂಭಗೊಳ್ಳುತ್ತಿರುವುದು ಹರ್ಷದ ವಿಚಾರ. ಮೇಕ್ ಇನ್ ಇಂಡಿಯಾದ ಕೊಡುಗೆ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತಿದೆ ಎಂದರು.
ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, ಪ್ರದಾನಿ ನರೇಂದ್ರ ಮೋದಿ ಅವರ ಅಭಿವೃದ್ದಿಯ ಕನಸಿಗೆ ವಂದೇ ಭಾರತ ರೈಲು ಸಾಕ್ಷಿ ಎಂದರು.
ಹು-ಧಾ ಮೇಯರ್ ವೀಣಾ ಭಾರದ್ವಾಡ, ಮಾಜಿ ಮೇಯರ್ ಶಿವು ಹಿರೇಮಠ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.