Advertisement

72 ತಾಸುಗಳ ಸೂತ್ರ: ಕೋವಿಡ್ ಹೆಚ್ಚಿರುವ ರಾಜ್ಯಗಳ ಸಿಎಂಗಳ ಜತೆ ಚರ್ಚೆ

02:18 AM Aug 12, 2020 | mahesh |

ಹೊಸದಿಲ್ಲಿ: “ಎಪ್ಪತ್ತೆರಡು ತಾಸುಗಳಲ್ಲಿ ಸೋಂಕುಪೀಡಿತರನ್ನು ಪತ್ತೆ ಹಚ್ಚಿ, ಪರೀಕ್ಷೆ ನಡೆಸಿ’ ಎಂಬ ಹೊಸ ಸೂತ್ರವನ್ನು ಕೋವಿಡ್ ನಿಯಂತ್ರಣಕ್ಕಾಗಿ ಪ್ರಧಾನಿ ಮೋದಿ ಮಂಡಿಸಿದ್ದಾರೆ. ದೇಶದಲ್ಲಿ ಅತೀ ಹೆಚ್ಚು ಪ್ರಕರಣಗಳಿರುವ 10 ರಾಜ್ಯಗಳ ಸಿಎಂಗಳ ಜತೆ ಮಂಗಳವಾರ ವೀಡಿಯೋ ಕಾನ್ಫರೆನ್ಸ್‌ ನಡೆಸಿದ ಪ್ರಧಾನಿ, ಈ ರಾಜ್ಯಗಳಲ್ಲಿ ಕೋವಿಡ್ ನಿಯಂತ್ರಿಸಿದರೆ ನಾವು ಗೆಲ್ಲುತ್ತೇವೆ ಎಂದಿದ್ದಾರೆ.

Advertisement

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ನಡೆಸಿರುವ 9ನೇ ವೀಡಿಯೋ ಕಾನ್ಫರೆನ್ಸ್‌ ಇದು. ಪ್ರಸ್ತುತ 10 ರಾಜ್ಯಗಳಲ್ಲಿ ದೇಶದ ಶೇ. 80 ರಷ್ಟು ಪ್ರಕರಣಗಳಿವೆ. ಹೀಗಾಗಿ ಈ ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣವೇ ಕೀಲಿಕೈ ಎಂದ ಪ್ರಧಾನಿ, ಪರೀಕ್ಷೆ ಹೆಚ್ಚಿಸುವಂತೆ ಸೂಚನೆ ನೀಡಿದರು. ಮುಖ್ಯವಾಗಿ ಬಿಹಾರ, ಗುಜರಾತ್‌, ಉತ್ತರ ಪ್ರದೇಶ, ಪಶ್ಚಿಮ ಬಂಗಾಲ ಮತ್ತು ತೆಲಂಗಾಣದಲ್ಲಿ ಪರೀಕ್ಷೆಗಳನ್ನು ಹೆಚ್ಚಿಸುವಂತೆ ಸೂಚಿಸಿದರಲ್ಲದೆ, ಈ ಕೆಲಸ ಅತ್ಯಂತ ತುರ್ತಾಗಿ ಆಗಬೇಕು ಎಂದರು.

ಸೋಂಕುಪೀಡಿತರ ಸಂಪರ್ಕಕ್ಕೆ ಬಂದವರನ್ನು 72 ತಾಸುಗಳಲ್ಲಿ ಪತ್ತೆ ಹಚ್ಚಿ ಪರೀಕ್ಷಿಸುವುದು ಸೋಂಕು ಪ್ರಸಾರ ನಿಯಂತ್ರಣಕ್ಕೆ ಮುಖ್ಯ. ಹೀಗಾಗಿ ಈ ಸೂತ್ರ ಅನುಸರಿಸುವಂತೆ ಪ್ರಧಾನಿ ಸೂಚಿಸಿದರು. ಕೇಂದ್ರ -ರಾಜ್ಯ ಜತೆಗೂಡಿ ಹೋರಾಡೋಣ ಎಂದರು.

ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಗುಜರಾತ್‌ ಸಿಎಂ ವಿಜಯ್‌ ರೂಪಾನಿ, ಬಿಹಾರ ಸಿಎಂ ನಿತೀಶ್‌ ಕುಮಾರ್‌, ಆಂಧ್ರ ಪ್ರದೇಶ ಸಿಎಂ ಜಗನ್‌ ಮೋಹನ್‌ ರೆಡ್ಡಿ ಭಾಗವಹಿಸಿದ್ದರು. ಹೋಂ ಕ್ವಾರಂಟೈನ್‌ನಲ್ಲಿರುವ ಕರ್ನಾಟಕ ಸಿಎಂ ಯಡಿಯೂರಪ್ಪ ಪರವಾಗಿ ಡಿಸಿಎಂ ಡಾ| ಅಶ್ವತ್ಥನಾರಾಯಣ ಮತ್ತು ಸಚಿವರಾದ ಡಾ| ಕೆ. ಸುಧಾಕರ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next